ಉಳ್ಳಾಲ: ಓವರ್ ಟೇಕ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರ ಬೀದಿ ಕಾಳಗ – ಪ್ರಕರಣ ದಾಖಲು

Spread the love

ಉಳ್ಳಾಲ: ಓವರ್ ಟೇಕ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರ ಬೀದಿ ಕಾಳಗ – ಪ್ರಕರಣ ದಾಖಲು

ಉಳ್ಳಾಲ: ಖಾಸಗಿ ಬಸ್ಸುಗಳೆರಡರ ನಿರ್ವಾಹಕರ ಮಧ್ಯೆ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ಹೊಡೆದಾಟದ ಹಂತಕ್ಕೆ ತಲುಪಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ನಿನ್ನೆ ನಡೆದಿದ್ದು, ಇಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಂಬಂಧಿಸಿ ನಿರ್ವಾಹಕರ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

ಬಸ್ಸಿನ ನಿರ್ವಾಹಕರಾದ ವಿಷ್ಣು ಮತ್ತು ಅಜಯ್ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತಲಪಾಡಿ-ಮಂಗಳೂರು ನಡುವಿನ ಪದ್ಮಾ ಟ್ರಾವೆಲ್ಸ್ ಮತ್ತು ಮಂಜೇರ್ಶವರ ಮಂಗಳೂರು ನಡುವೆ ಚಲಿಸುವ ಪಿಟಿಸಿ ಟ್ರಾವೆಲ್ಸ್ ಬಸ್ಸುಗಳೆರಡರ ನಿರ್ವಾಹಕರ ನಡುವೆ ಹೊಯಿಕೈ ನಡೆದಿದೆ. ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಒಂದು ಬಸ್ಸಿಗೆ ಇನ್ನೊಂದು ಬಸ್ಸನ್ನು ಅಡ್ಡವಾಗಿ ಇಟ್ಟ ಪರಿಣಾಮ ಗಲಾಟೆ ಆರಂಭವಾಗಿತ್ತು. ತದನಂತರ ಇಬ್ಬರು ನಿರ್ವಾಹಕರು ಸಾರ್ವಜನಿಕವಾಗಿ ಅಶ್ಲೀಲವಾಗಿ ನಿಂದಿಸಿಕೊಂಡು ಹೊಡೆದಾಟ ಆರಂಭಿಸಿದ್ದಾರೆ. ಇಬ್ಬರ ಕಾಳಗ ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಮುಜುಗರವನ್ನುಂಟು ಮಾಡಿತ್ತು. ಇಬ್ಬರ ಗಲಾಟೆಯನ್ನು ಸ್ಥಳೀಯ ರಿಕ್ಷಾ ಪಾರ್ಕ್ನ ಚಾಲಕರು ತಡೆದಿದ್ದರು.


Spread the love
Subscribe
Notify of

0 Comments
Inline Feedbacks
View all comments