ಉಳ್ಳಾಲ: ಗಾಂಜಾ ಮಾರಾಟ ಯತ್ನ, ಓರ್ವನ ಬಂಧನ

Spread the love

ಉಳ್ಳಾಲ: ಗಾಂಜಾ ಮಾರಾಟ ಯತ್ನ, ಓರ್ವನ ಬಂಧನ

ಉಳ್ಳಾಲ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಎಸಿಪಿ ನೇತೃತ್ವದ ಮಾದಕ ದ್ರವ್ಯ ವಿರೋಧಿ ತಂಡ ಬೆಳ್ಮ ಗ್ರಾ.ಪಂ ವ್ಯಾಪ್ತಿಯ ಖಾಲಿ ಜಾಗದಿಂದ ಬಂಧಿಸಲಾಗಿದೆ.

ಕೋಟೆಕಾರು ಬೀರಿ ನಿವಾಸಿ ಮಹಮ್ಮದ್ ಇರ್ಫಾನ್ (22) ಬಂಧಿತ.

ಬಂಧಿತನಿಂದ ರೂ. 9,660 ಬೆಲೆಯ 322 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಎಸಿಪಿ ಧನ್ಯಾ ನಾಯಕ್, ಕೊಣಾಜೆ ಠಾಣಾ ಉಪನಿರೀಕ್ಷಕ ನಾಗರಾಜ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.


Spread the love