ಉಳ್ಳಾಲ ಟಾರ್ಗೆಟ್ ಗ್ರೂಪಿನ ಮುಖಂಡರ ಬಂಧನ

Spread the love

ಉಳ್ಳಾಲ ಟಾರ್ಗೆಟ್ ಗ್ರೂಪಿನ ಮುಖಂಡರ ಬಂಧನ

ಮಂಗಳೂರು :ವನಗರದ ಉಳ್ಳಾಲದ ಸುಂದರಿಬಾಗ್ನ ನಿವಾಸಿಯಾದ ಇಲ್ಯಾಸ್ @ ಟಾರ್ಗೆಟ್  ಇಲ್ಯಾಸ್  ಮತ್ತು ಉಳ್ಳಾಲದ ಮೇಲಂಗಡಿ ದರ್ಗಾ ನಿವಾಸಿಯಾದ ಸುರ್ಮೋ ಇಮ್ರಾನ್ @ ಇಮ್ರಾನ್ ದಸ್ತಗಿರಿ ಮಾಡುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ  ಪೊಲೀಸರು ಯಶಸ್ವಿಯಾಗಿರುತ್ತಾರೆ.

   ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ  ಮಂಗಳೂರು ನಗರದ ಜಪ್ಪು ಕೊಡ್ಪಾಡಿ ಮಸೀದಿ ಬಳಿಯ ಫ್ಲಾಟ್ ಒಂದರಲ್ಲಿ ವಾಸವಾಗಿರುವ ಬಗ್ಗೆ ದೊರೆತ ಮಾಹಿತಿಯಂತೆ ರೌಡಿ ನಿಗ್ರಹದಳದ ಸಿಬ್ಬಂದಿಯವರು ದಾಳಿ ಮಾಡಿ ಇಲ್ಯಾಸ್ನನ್ನು  ವಶಕ್ಕೆ ಪಡೆದಿರುವುದಾಗಿದೆ. ಈತನು ಉಳ್ಳಾಲದಲ್ಲಿ ನಡೆದ ದಾವುದ್ ಎಂಬಾತನನ್ನು  ತನ್ನ ಸಹಚರರೊಂದಿಗೆ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು ನಂತರ ತಲೆ ಮರೆಸಿಕೊಂಡಿರಿವುದಾಗಿದೆ.ಈತನ ವಿರುದ್ದ ಬಜ್ಪೆ ಹಾಗು ಉತ್ತರ ಕನ್ನಡದ ಯಲ್ಲಾಪುರ ಕೊಣಾಜೆ ಪೋಲಿಸ್ ಠಾಣೆಗಳಲ್ಲಿ ಒಟ್ಟು 4 ವಾರಂಟ್ ಗಳಿದ್ದು ನ್ಯಾಯಲಯಾಕ್ಕೆ ಹಾಜರಾಗದೇ ಇದ್ದು ತಲೆ ಮರೆಸಿಕೊಂಡಿರುವುದಾಗಿದೆ.ಈತನ ವಿರುದ್ದ ನಗರದ ವಿವಿದ ಠಾಣೆಗಳಲ್ಲಿ ಉಡುಪಿ ಜಿಲ್ಲೆಯ ಪಡುಬಿದ್ರೆ, ಉತ್ತರಕನ್ನಡದ ಯಲ್ಲಾಪುರ ಠಾಣೆಗಳಲ್ಲಿ ಕೊಲೆಯತ್ನ,ದರೋಡೆ,ದರೋಡೆಗೆ ಯತ್ನ ಮೊದಲಾದ ಸುಮಾರು 25 ಪ್ರಕರಣಗಳು ಧಾಖಲಾಗಿರುತ್ತದೆ.ಮುಂದಿನ ಕ್ರಮದ ಬಗ್ಗೆ ಉಳ್ಳಾಲ ಪೋಲಿಸ್ ಠಾಣೆಗೆ ಹಸ್ತಂತರ ಮಾಡಲಾಗಿದೆ.

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ  ಮುಂಬಾಯಿ ನಗರದ ದಾದರ್ ರೈಲ್ವೆ ನಿಲ್ದಾಣದ ಬಳಿಯಲ್ಲಿರುವ ವುಡ್ ಲ್ಯಾಂಡ್ ಗೆಸ್ಟ್ ಹೌಸ್ ಲಾಡ್ಜ್ ನಲ್ಲಿ ವಾಸವಾಗಿರುವ ಬಗ್ಗೆ ದೊರೆತ ಮಾಹಿತಿಯಂತೆ ರೌಡಿ ನಿಗ್ರಹದಳದ ಸಿಬ್ಬಂದಿಯವರು ದಾಳಿ ಮಾಡಿ ಸುರ್ಮೋ ಇಮ್ರಾನ್ ನನ್ನು ವಶಕ್ಕೆ ಪಡೆದಿರುವುದಾಗಿದೆ. ಈತನು ಉಳ್ಳಾಲದಲ್ಲಿ ನಡೆದ ದಾವುದ್ ಎಂಬಾತನನ್ನು  ತನ್ನ ಸಹಚರರೊಂದಿಗೆ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು ನಂತರ ತಲೆ ಮರೆಸಿಕೊಂಡಿರಿವುದಾಗಿದೆ.ಈತನ ವಿರುದ್ದ ಬಜ್ಪೆ ಉಳ್ಳಾಲ ಮತ್ತು ಯಲ್ಲಾಪುರ ಪೋಲಿಸ್ ಠಾಣೆಗಳಲ್ಲಿ ಒಟ್ಟು 3 ವಾರಂಟ್ ಗಳಿದ್ದು ನ್ಯಾಯಲಯಾಕ್ಕೆ ಹಾಜರಾಗದೇ ಇದ್ದು ತಲೆ ಮರೆಸಿಕೊಂಡಿರುವುದಾಗಿದೆ. ಈತನ ವಿರುದ್ದ ನಗರದ ಉಳ್ಳಾಲ, ಬಜ್ಪೆ, ಮತ್ತು ಯಲ್ಲಾಪುರ ಠಾಣೆಗಳಲ್ಲಿ ಕೊಲೆಯತ್ನ,ದರೋಡೆ,ದರೋಡೆಗೆ ಯತ್ನ ಮೊದಲಾದ ಸುಮಾರು 9 ಪ್ರಕರಣಗಳು ಧಾಖಲಾಗಿರುತ್ತದೆ.ಮುಂದಿನ ಕ್ರಮದ ಬಗ್ಗೆ ಉಳ್ಳಾಲ ಪೋಲಿಸ್ ಠಾಣೆಗೆ ಹಸ್ತಂತರ ಮಾಡಲಾಗಿದೆ. ದಿನಾಂಕ 19-11-2017 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ.ಆರ್‌.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಹನುಮಂತರಾಯ (ಐಪಿಎಸ್‌) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು  ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ  ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಯವರು ಮತ್ತು ಸಿಬ್ಬಂದಿಯವರು  ಪತ್ತೆ ಕಾರ್ಯದಲ್ಲಿ ಬಾಗವಹಿಸಿರುತ್ತಾರೆ.


Spread the love