ಉಳ್ಳಾಲ: ದೋಣಿ ಮಗುಚಿ ಬಿದ್ದು ಯುವತಿ ಸಾವು

Spread the love

ಉಳ್ಳಾಲ: ದೋಣಿ ಮಗುಚಿ ಬಿದ್ದು ಯುವತಿ ಸಾವು

ಮಂಗಳೂರು: ಚರ್ಚ್ ವಾರ್ಷಿಕೋತ್ಸವಕ್ಕೆ ಬಂದು ವಾಪಾಸಾಗುತ್ತಿದ್ದ ವೇಳ ದೋಣಿ ಮಗುಚಿ ಬಿದ್ದು ಯುವತಿಯೋರ್ವರು  ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಉಳಿಯದಲ್ಲಿ ಭಾನುವಾರ ಸಂಭವಿಸಿದೆ

ಮೃತ ಯುವತಿಯನ್ನು ರೆನಿಟಾ (18) ಎಂದು ಗುರುತಿಸಲಾಗಿದೆ.

ಭಾನುವಾರ ತೊಕ್ಕೊಟ್ಟು  ಚಚ್ ೯ ನ ವಾರ್ಷಿಕೋತ್ಸವಕ್ಕೆಂದು ಉಳಿಯ ನಿವಾಸಿ ಜಾಜ್ ೯ ಎಂಬವರ ಮನೆಗೆ  ಬಂದಿದ್ದು ಹಬ್ಬ ಮುಗಿಸಿ ದೋಣಿಯಲ್ಲಿ ಆರು ಮಂದಿ ತೆರಳುವ ಸಂದರ್ಭದಲ್ಲಿ ದೋಣಿ ಮುಗುಚಿ ಬಿದ್ದಿದ್ದು ಇನ್ನೋರ್ವ ಯುವತಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.


Spread the love