ಉಳ್ಳಾಲ ನಗರಸಭೆಯಿಂದ ಅನಧೀಕೃತ ಗೂಡಂಗಡಿಯನ್ನು ತೆರವು

Spread the love

ಉಳ್ಳಾಲ ನಗರಸಭೆಯಿಂದ ಅನಧೀಕೃತ ಗೂಡಂಗಡಿಯನ್ನು ತೆರವು

ಉಳ್ಳಾಲ: ಉಳ್ಳಾಲ ನಗರ ಸಭಾ ವತಿಯಿಂದ ಸಾರ್ವಜನಿಕರ ದೂರಿನ ಮೇರೆಗೆ ಮತ್ತು ಪೌರಾಯುಕ್ತರ ಆದೇಶದ ಮೇರೆಗೆ ತೊಕ್ಕೋಟ್ಟು ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ತೆರವುಗೊಳಿಸಲಾಯಿತು.

 ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಕಾರ್ಯಾಚರಣೆ ಮಾಡಿದ್ದೇವೆ,ಸ್ವಚ್ಚ ತೊಕ್ಕೋಟ್ಟಿನ ಪರಿಕಲ್ಪನೆಗೆ ಉಳ್ಳಾಲ ನಗರ ಸಭೆಯೊಂದಿಗೆ ಎಲ್ಲಾ ನಾಗರಿಕರು ಕೈ ಜೋಡಿಸಿ ಎಂದು ಉಳ್ಳಾಲ ನಗರ ಸಭೆ ಆಯುಕ್ತೆ ವಾಣಿ ಆಳ್ವ ತಿಳಿಸಿದರು.

ಶಿಯಾಳದ ಗೆರಟೆಯಲ್ಲಿ ಮಳೆಯ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ಆರೋಗ್ಯ ಇಲಾಖೆ ಈ ಹಿಂದೆ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ ಈ ನಿಟ್ಟಿನಲ್ಲಿ ತೊಕ್ಕೋಟ್ಟು ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ತೆರವುಗೊಳಿಸಿದ್ದೇವೆ ಎಂದು ಉಳ್ಳಾಲ ನಗರ ಸಭೆ ಆರೋಗ್ಯ ನಿರೀಕ್ಷಕ ರಾಜೇಶ್ ತಿಳಿಸಿದರು

 


Spread the love