ಉಳ್ಳಾಲ ಪೋಲಿಸರಿಂದ ಬೈಕ್ ಕಳ್ಳರಿಬ್ಬರ ಸೆರೆ

Spread the love

ಉಳ್ಳಾಲ ಪೋಲಿಸರಿಂದ ಬೈಕ್ ಕಳ್ಳರಿಬ್ಬರ ಸೆರೆ

ಉಳ್ಳಾಲ : ಬೈಕ್ ಕಳವು ನಡೆಸಿದ ಆರೋಪಿಗಳಿಬ್ಬರನ್ನು ಉಳ್ಳಾಲ ಪೊಲೀಸರು ಉಳ್ಳಾಲದಿಂದ ಬಂಧಿಸಿದ್ದು, ಬಂಧಿತರಿಂದ ತೊಕ್ಕೊಟ್ಟುವಿನಿಂದ ಕಳವು ನಡೆಸಿದ ಆಕ್ಟಿವಾ ಸ್ಕೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮುಕ್ಕಚ್ಚೇರಿ ಕಡಪ್ಪುರ ನಿವಾಸಿ ಅಬ್ದುಲ್ ಸವಾದ್ (26) ಮತ್ತು ಧರ್ಮನಗರ ನಿವಾಸಿ ಯಶ್ಬಿತ್ ( 22) ಬಂಧಿತರು. ಇಬ್ಬರು ಕೆಲ ದಿನಗಳ ಹಿಂದೆ ತೊಕ್ಕೊಟ್ಟು ಕೀರ್ತಿ ಹೊಟೇಲ್ ಎದುರುಗಡೆ ನಿಲ್ಲಿಸಿದ್ದ ಆಕ್ಟಿವಾ ಸ್ಕೂಟರನ್ನು ಕಳವು ನಡೆಸಿದ್ದರು.

ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಇಬ್ಬರನ್ನು ಉಳ್ಳಾಲದಿಂದ ಬಂಧಿಸಿದ್ದಾರೆ. ಆರೋಪಿಗಳಲ್ಲಿ ಅಬ್ದುಲ್ ಸವಾದ್ ವಿರುದ್ಧ ಗಾಂಜಾ ಹಾಗೂ ಕಳವು ಪ್ರಕರಣಗಳು ಮಂಗಳೂರಿನ ವಿವಿಧ ಠಾಣೆಗಳಲ್ಲಿದೆ. ಯಶ್ಬಿತ್ ಉಳ್ಳಾಲ – ಸ್ಟೇಟ್ ಬ್ಯಾಂಕ್ ಬಸ್ಸಿನಲ್ಲಿ ನಿರ್ವಾಹಕನಾಗಿದ್ದಾನೆ. ಠಾಣಾಧಿಕಾರಿ ಬಾಲಕೃಷ್ಣ ಹೆಚ್.ಎನ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ರೂ. 80,000 ಬೆಲೆ ಬಾಳುವ ಆಕ್ಟಿವಾ ಸ್ಕೂಟರನ್ನು ವಶಕ್ಕೆ ಪಡೆಯಲಾಗಿದೆ.


Spread the love