ಎಂಟು ದಿನಗಳಲ್ಲಿ ಮದುವೆಯಾಗಬೇಕಾಗಿದ್ದ ವರ ರಸ್ತೆ ಅಪಘಾತದಲ್ಲಿ ದುರ್ಮರಣ

Spread the love

ಎಂಟು ದಿನಗಳಲ್ಲಿ ಮದುವೆಯಾಗಬೇಕಾಗಿದ್ದ ವರ ರಸ್ತೆ ಅಪಘಾತದಲ್ಲಿ ದುರ್ಮರಣ

ಕುಂದಾಪುರ: ಮುಂದಿನ 8 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನೋರ್ವ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಬಳಿ ಶನಿವಾರ ನಡೆದಿದೆ.

ಮೃತ ಯುವಕನನನ್ನು ಕೋಟೇಶ್ವರ ದೊಡ್ಡೋಣಿ ರಸ್ತೆಯ ಪೇಟೆಮನೆ ನಿವಾಸಿ ವರುಣ (30) ಎಂದು ಗುರುತಿಸಲಾಗಿದೆ.

ವರುಣ್ ಅವರು ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಡಿಸೆಂಬರ್ 30 ರಂದು ಮದುವೆ ದಿನ ನಿಗದಿಯಾಗಿತ್ತು ಈ ಹಿನ್ನಲೆಯಲ್ಲಿ ಊರಿಗೆ ಮರಳಿದ್ದರು.

ಮದುವೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಾಲಿಗ್ರಾಮ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುವ ಸಂದರ್ಭ ಈ ದುರ್ಘಟನೆ ನಡೆದಿದೆ. ತನ್ನ ಬೈಕಿನಲ್ಲಿ ಸಾಲಿಗ್ರಾಮ ಕಡೆಗೆ ಹೋಗುತ್ತಿರುವಾಗ ಚಿತ್ರಪಾಡಿ ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನ ಬಳಿ ಲಾರಿಯ ಚಾಲಕ ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದು ವರುಣ್ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಮುಂದೆ ಸಾಗುತ್ತಿದ್ದ ರೋಡ್ ರೋಲರಿಗೆ ಬೈಕ್ ತಾಗಿ ವರುಣ್ ರಸ್ತೆಗೆ ಬಿದ್ದಿದ್ದು ಅವರ ಮೇಲೆ ಲಾರಿ ಹತ್ತಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೋಟ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love