ಎಂ.ಆರ್.ಎಫ್ ಮೋಟೋ ಕ್ರಾಸ್ ಮುಂದಿನ ಸುತ್ತಿಗೆ ಅರ್ಹತೆ ಪಡೆದ ಮಂಗಳೂರಿನ ಕ್ಯಾಟ್ ರೇಸಿಂಗ್

ಎಂ.ಆರ್.ಎಫ್ ಮೋಟೋ ಕ್ರಾಸ್ ಮುಂದಿನ ಸುತ್ತಿಗೆ ಅರ್ಹತೆ ಪಡೆದ ಮಂಗಳೂರಿನ ಕ್ಯಾಟ್ ರೇಸಿಂಗ್

ಪಣಂಬೂರು: ಮಂಗಳೂರಿನ ಕ್ಯಾಟ್ ರೇಸಿಂಗ್ ತಂಡ ಮತ್ತೊಂದು ಚಾಂಪಿಯನ್ ಟ್ರೋಫಿ ಜಯಿಸುವತ್ತಾ ಹೆಜ್ಜೆ ಇಟ್ಟಿದೆ. ಕೊಯಮತ್ತೂರಿನಲ್ಲಿ ನಡೆದ ಎಂ.ಆರ್.ಎಫ್ ಮೋಟೋ ಕ್ರಾಸ್ ರಾಷ್ಟ್ರೀಯ ಚಾಂಪಿಯನ್‍ಶಿಪ್‍ನಲ್ಲಿ ಅಂಕದಲ್ಲಿ ಮೊದಲ ಸ್ಥಾನದಲ್ಲಿದ್ದು ಸೆ.23-24ರಂದು ಜೈಪುರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ.

ಲ್ಯಾಂಡ್ ಲಿಂಕ್ಸ್ ಪ್ರಾಯೋಜಕತ್ವದ ಕ್ಯಾಟ್ ರೇಸಿಂಗ್‍ನ ಅದ್ನಾನ್ ಅವರು ಕ್ರಮವಾಗಿ 250 ಸಿ ಸಿ ಹಾಗೂ 500 ಸಿ ಸಿ ವಿಭಾಗದಲ್ಲಿ ಈ ಬಾರಿ ಗೋವಾದಲ್ಲಿ 3ನೇ ಸ್ಥಾನದಲ್ಲಿದ್ದರೆ , ಜುಲೈನಲ್ಲಿ ಕೊಯಮತ್ತೂರು ರೇಸ್ ನಲ್ಲಿ ಮೊದಲ ಸ್ಥಾನಕ್ಕೆ ಬಂದಿದ್ದಾರೆ.ಜೈಪುರದಲ್ಲಿ ಸೆ.23 ಹಾಗೂ ಸೆ.24ರಂದು ಮುಂದಿನ ಸುತ್ತಿನ ರೇಸ್ ನಡೆಯಲಿದ್ದು ಸ್ಥಾನದಲ್ಲಿದ್ದು ಲೀಡ್ ಅಂಕದೊಂದಿಗೆ ಸ್ಪರ್ಧಿಸಲಿದ್ದಾರೆ. ಬಳಿಕ ಈ ಸ್ಪರ್ಧೆ ಇಂದೋರ್, ಬೆಂಗಳೂರು ಹಾಗೂ ಪೂನಾದಲ್ಲಿ ಜರಗಲಿದೆ.ಅದ್ನಾನ್ ಕ್ಯಾಟ್ ರೇಸ್ ತಂಡದ ಸಾಧನೆ ಬಗ್ಗೆ ಪ್ರದೀಪ್ ಪಾಲೇಮಾರ್ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ತಂಡಕ್ಕೆ ಮುಂದೆಯೂ ಸರ್ವ ರೀತಿಯಲ್ಲಿಯೂ ನೆರವು ಒದಗಿಸಲಾಗುವುದು ಎಂದರು.