ಎಂ.ಆರ್.ಪಿ.ಎಲ್ ಉದ್ಯೋಗ ನೇಮಕಾತಿಯಲ್ಲಿ ತುಳುನಾಡಿನ ಯುವಕರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ  ಪ್ರತಿಭಟನೆ

Spread the love

ಎಂ.ಆರ್.ಪಿ.ಎಲ್ ಉದ್ಯೋಗ ನೇಮಕಾತಿಯಲ್ಲಿ ತುಳುನಾಡಿನ ಯುವಕರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ  ಪ್ರತಿಭಟನೆ

ತೊಕ್ಕೊಟ್ಟು : ಎಂ.ಆರ್.ಪಿ.ಎಲ್ ಕಂಪೆನಿ ದೇಶವ್ಯಾಪಿಯಾಗಿ ನಡಸುತ್ತಿರುವ 233 ಹುದ್ದೆಗಳ ನೇಮಕಾತಿಯಲ್ಲಿ ಈ ಕಂಪೆನಿಗೆ ನೆಲಜಲವನ್ನು ಕೊಟ್ಟ ತುಳುನಾಡಿನ ಯುವಕರಿಗೆ ಶೇ80 ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ  ತೊಕೊಟ್ಟು ಬಸ್ ನಿಲ್ಧಾಣದಲ್ಲಿ ಡಿವೈಎಫ್‍ಐ ವತಿಯಿಂದ ಯುವಜನರ ಪ್ರತಿಭಟನೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‍ಐ ಜಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಎಂ ಆರ್ ಪಿ ಎಲ್ ಬರುವಾಗ ಇಲ್ಲಿನ ಜನಪ್ರತಿನಿಧಿಗಳು ಇದರಿಂದಾಗಿ ಸಾವಿರಾರು ಉದ್ಯೋಗ ಸೃಷ್ಟಿಯಾಗುವ ಭರವಸೆ ನೀಡಿದ್ದರು. ಆದರೆ ಈಗ ಇಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳನ್ನು ಸ್ಥಳೀಯರಿಗೆ ಕೊಡದೇ ಹೊರ ರಾಜ್ಯದವರಿಗೆ ಕೊಡಲಾಗುತ್ತಿದೆ. ಡಿವೈಎಫ್‍ಐ ಸಂಘಟನೆ ಇದರ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದು ಕೂಡಲೇ ಎಂ ಆರ್ ಪಿ ಎಲ್ 233 ಹುದ್ದೆಗಳ ನೇಮಕಾತಿಗಾಗಿ ದೇಶವ್ಯಾಪಿ ನೀಡಿರುವ ಆನ್ಲೈನ್ ನೇಮಕಾತಿ ಜಾಹಿರಾತನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು .

ಪ್ರತಿಭಟನೆಯಲ್ಲಿ ಡಿವೈಎಫ್‍ಐ ಉಳ್ಳಾಲ ವಲಯದ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ , ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಡಿವೈಎಫ್‍ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ , ಕೋಟಕಾರ್ ಸರ್ಕಲ್ ಬೀಡಿ ಯೂನಿಯನ್ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿ , ಡಿವೈಎಫ್‍ಐ ಮುಖಂಡರಾದ ಜೀವನ್ ರಾಜ್ ಕುತ್ತಾರ್ , ಸಂತೋಷ್ ಶೆಟ್ಟಿ ಪಿಲಾರ್ , ರಝಾಕ್ ಮೊಂಟೆಪದವು , ಅಶ್ಫಾಕ್ ಅಳೇಕಲ, ಗ್ರಾಮ ಪಂಚಾಯತಿ ಸದಸ್ಯರಾದ ಅಶ್ರಫ್ ಹರೇಕಳ , ಕಾರ್ಮಿಕ ಮುಖಂಡರಾದ ಜಯಂತ್ ನಾಯ್ಕ್ , ಬಾಬು ಪಿಲಾರ್ , ಅರುಣ್ ಉಳ್ಳಾಲ್ , ಕಟ್ಟಡ ಕಾರ್ಮಿಕರ ಸಂಘದ ಜನಾರ್ದನ ಕುತ್ತಾರ್ , ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ನಾರಾಯಣ ತಲಪಾಡಿ ಪಾಲ್ಗೊಂಡಿದ್ದರು. ಡಿವೈಎಫ್‍ಐ ಕಾರ್ಯದರ್ಶಿ ಸುನಿಲ್ ತೇವುಲ ಸ್ವಾಗತಿಸಿದರೆ ಸಹ ಕಾರ್ಯದರ್ಶಿ ನಿತಿನ್ ಕುತ್ತಾರ್ ವಂದಿಸಿದರು.


Spread the love
1 Comment
Inline Feedbacks
View all comments
4 years ago

thulunadinavare DKSHI hinde hoguvudu bittu intha kelasa madi idaralli rajakeeya jathi dharma barabaradu