ಎಂ.ಫ್ರೆಂಡ್ಸ್ ಅಧ್ಯಕ್ಷರಾಗಿ ಹನೀಫ್ ಹಾಜಿ ಪುನರಾಯ್ಕೆ

Spread the love

ಎಂ.ಫ್ರೆಂಡ್ಸ್ ಅಧ್ಯಕ್ಷರಾಗಿ ಹನೀಫ್ ಹಾಜಿ ಪುನರಾಯ್ಕೆ 

ಮಂಗಳೂರು: ಸಾಮಾಜಿಕ ಸೇವಾ ಸಂಸ್ಥೆ ಮಂಗಳೂರಿನ ಎಂ.ಫ್ರೆಂಡ್ಸ್ ಟ್ರಸ್ಟ್ ನ ಮಹಾಸಭೆಯು ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅವರನ್ನು ಪುನರಾಯ್ಕೆ ಮಾಡಲಾಯಿತು, ಉಪಾಧ್ಯಕ್ಷರಾಗಿ ಕೆ.ಪಿ. ಸಾದಿಕ್ ಹಾಜಿ ಕುಂಬ್ರ ಪುತ್ತೂರು, ಸುಜಾಹ್ ಮೊಹಮ್ಮದ್ ಅಲಂಕಾರ್, ಪ್ರಧಾನ ಕಾರ್ಯದರ್ಶಿಯಾಗಿ ರಶೀದ್ ವಿಟ್ಲ, ಕೋಶಾಧಿಕಾರಿಯಾಗಿ ಅಬೂಬಕರ್ ನೋಟರಿ ವಿಟ್ಲ, ಕಾರ್ಯದರ್ಶಿಯಾಗಿ ಅನ್ಸಾರ್ ಬೆಳ್ಳಾರೆ ಹಾಗೂ ಆಶಿಕ್ ಕುಕ್ಕಾಜೆ, ಸಲಹೆಗಾರರಾಗಿ ಅಶ್ರಫ್ ವಿ.ಎಚ್., ಮುಸ್ತಫಾ ಗೋಳ್ತಮಜಲು ಅವರನ್ನು ಆಯ್ಕೆ ಮಾಡಲಾಯಿತು.


Spread the love