ಎಕ್ಕೂರಿನಲ್ಲಿ ಭೀಕರ ಅಪಘಾತ-ಬೈಕ್ ಸವಾರ ಸ್ಥಳದಲ್ಲಿಯೇ ಸಾವು

Spread the love

ಎಕ್ಕೂರಿನಲ್ಲಿ ಭೀಕರ ಅಪಘಾತ-ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಮಂಗಳೂರು: ಬೈಕಿಗೆ ಮೀನಿನ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಮಂಗಳೂರಿನ ಎಕ್ಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.

ಮೃತ ಬೈಕ್‌ ಸವಾರನ ಗುರುತು ಪತ್ತೆಯಾಗಿಲ್ಲ. ಇಂದು ಮಧ್ಯಾಹ್ನ ಸುಮಾರು 12. 15 ರ ವೇಳೆಗೆ ಅಪಘಾತ ಸಂಭವಿಸಿದೆ. ಮಂಗಳೂರಿನ ಪಂಪ್‌ ವೆಲ್‌ ಭಾಗದಿಂದ ತೊಕ್ಕೋಟು ಕಡೆಗೆ ಸಾಗುತ್ತಿದ್ದ ಮೀನಿನ ಲಾರಿ ಎಕ್ಕೂರು ಬಳಿ ಬೈಕಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್‌ ಸವಾರ ಬೈಕ್‌ ಸಮೇತ ರಸ್ತೆಗೆ ಬಿದ್ದಿದ್ದು, ಲಾರಿಯ ಚಕ್ರ ಸವಾರನ ಮೇಲೆ ಚಲಿಸಿದೆ.

ಇದರಿಂದಾಗಿ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸವಾರನ ದೇಹ ಛಿದ್ರ ಛಿದ್ರವಾಗಿದೆ. ಮೃತ ಸವಾರನ ಗುರುತು ಇನ್ನಷ್ಟೇ ಗೊತ್ತಾಗ ಬೇಕಿದೆ. ಮಂಗಳೂರಿನ ಟ್ರಾಫಿಕ್‌ ದಕ್ಷಿಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love