ಎನ್‌.ಎಸ್‌.ಯು.ಐ ಕಾಲೇಜು ಘಟಕಗಳ ಪದಗ್ರಹಣ : ಮನಪಾ ವಿಜೇತ ಸದಸ್ಯರಿಗೆ ಅಭಿನಂದನಾ ಸಮಾರಂಭ

ಎನ್‌.ಎಸ್‌.ಯು.ಐ ಕಾಲೇಜು ಘಟಕಗಳ ಪದಗ್ರಹಣ : ಮನಪಾ ವಿಜೇತ ಸದಸ್ಯರಿಗೆ ಅಭಿನಂದನಾ ಸಮಾರಂಭ

ಮಂಗಳೂರು: ದ.ಕ. ಎನ್‌ಎಸ್‌ಯುಐ ಹಾಗೂ ಮಂಗಳೂರು ನಗರ ವತಿಯಿಂದ ಮಂಗಳೂರಿನ ನಾಲ್ಕು ಕಾಲೇಜು ಎನ್‌ಎಸ್‌ಯುಐ ಘಟಕಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವು ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಎನ್‌ಎಸ್‌ಯುಐ ಜಿಲ್ಲಾ ಉಸ್ತುವಾರಿ ಸುರೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಜಿಲ್ಲಾ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಹಾಗೂ ಎನ್‌ಎಸ್‌ಯುಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶೌನಕ್ ರೈ ನೇತೃತ್ವದಲ್ಲಿ ಸಭೆ ನಡೆಯಿತು.

ನಾಲ್ಕು ಕಾಲೇಜುಗಳ ವಿದ್ಯಾರ್ಥಿ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಪಾಲಿಕೆಯ ಸದಸ್ಯರ ಪರವಾಗಿ ಪ್ರವೀಣ್ ಚಂದ್ರ ಆಳ್ವ ಹಾಗೂ ಎ.ಸಿ. ವಿನಯರಾಜ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಖಾಲಿದ್ ಉಜಿರೆ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಅನ್ಸಾರುದ್ದೀನ್ ಸಾಲ್ಮರ, ಮಂಗಳೂರು ದಕ್ಷಿಣ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಮರ್ಥ್ ಭಟ್, ಮಾಜಿ ಎನ್‌ಎಸ್‌ಯುಐ ನಗರಾಧ್ಯಕ್ಷ ಶ್ರೇಯಸ್ ಭಟ್ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಆಸ್ಟನ್ ಸಿಕ್ವೇರಾ, ಅನ್ವಿತ್ ಕಟೀಲ್, ಎನ್‌ಎಸ್‌ಯುಐ ನಗರ ಉಪಾಧ್ಯಕ್ಷ ಪ್ರೀಮಸ್, ರಕ್ಷಣ್ ಗೌಡ, ಶೇಕ್ ಅಫ್ಸಾನ್, ರಾಹುಲ್, ಅಲ್ಫಾಝ್ ಬಜಾಲ್, ಆರೋನ್ ರೋಡ್ರಿಗಸ್ ಮುಂತಾದವರು ಸಹಕರಿಸಿದ್ದರು. ಮನ್ಸೂರ್ ಕಾರ್ಯಕ್ರಮ ನಿರೂಪಿಸಿದರು. ಸವಾದ್ ಸುಳ್ಯ ಸ್ವಾಗತಿಸಿದರು. ಶೌನಕ್ ರೈ ವಂದಿಸಿದರು.