ಎಪ್ರಿಲ್ 28 ರಂದು ದುಬಾಯಿಯಲ್ಲಿ ಕನ್ನಡಿಗರು ದುಬಾಯಿ ಇದರ ವತಿಯಿಂದ ‘ಸಂಗೀತ ಸೌರಭ 2017’

Spread the love

ಎಪ್ರಿಲ್ 28 ರಂದು ದುಬಾಯಿಯಲ್ಲಿ ಕನ್ನಡಿಗರು ದುಬಾಯಿ ಇದರ ವತಿಯಿಂದ ‘ಸಂಗೀತ ಸೌರಭ 2017’

ದುಬಾಯಿ: ಕನ್ನಡದ ಶಬ್ದ ತರಂಗಳು ದುಬೈಯ ಮರಳುಗಾಡಿನಲ್ಲಿ ಬಾನೆತ್ತರಕ್ಕೆ ಇರುವ ಕಟ್ಟಡಗಳ ಮದ್ಯೆ ಕೇಳಿಸುವ ಮತ್ತು ಅರಬಿ ಸಮುದ್ರಗಳ ನಡುವೆ ಅಲೆ ಅಲೆಯಾಗಿ ಕನ್ನಡದ ಗಾಳಿ ಬೀಸುವ ಸುವರ್ಣ ಗಳಿಗೆಗೆ ಇನ್ನು ಕೇವಲ ಕೆಲವು ದಿನಗಳು ಮಾತ್ರ ಬಾಕಿ. ಕನ್ನಡನಾಡಿನ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗರು ದುಬಾಯಿ ಈಗಾಗಲೇ ಕನ್ನಡ ನಾಡಿನ ಹಿರಿಮೆ ಗರಿಮೆ ಎತ್ತಿ ಹಿಡಿಯುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ ಯು.ಎ.ಇ ಕನ್ನಡಿಗರ ಮನೆಮಾತಾಗಿದ್ದಾರೆ.ಪ್ರಸ್ತುತ ವರ್ಷದಲ್ಲಿ ಒಂದು ವಿಭಿನ್ನ ಕಾರ್ಯಕ್ರಮವಾದ “ಸಂಗೀತ ಸೌರಭ-2017”

ಪದ್ಮಶ್ರೀ ಪುರಸ್ಕ್ರತ ಡಾ.ಖದ್ರಿ ಗೋಪಾಲನಾತ್ಶ್ರೀ & ಪಂಡಿತ್ ಪ್ರವೀಣ್ ಗೋಡ್ಕಿಂಡಿ ಅವರ ಜುಗಲ್‌ಬಂದಿ ಹಾಗೂ ಆಲ್ ಓಕೆ ಕನ್ನಡ ರಾಪ್ಟೀಮ್ ಕಾರ್ಯಕ್ರಮಗಳ ಸಂಯೋಜನೆಯಲ್ಲಿ ಅತ್ಯುತ್ತಮವಾಗಿ ಮೂಡಿ ಬರಲಿದೆ.


Spread the love