ಎಬಿವಿಪಿಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಣೆ

ಎಬಿವಿಪಿಯ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಣೆ

ಮಂಗಳೂರು :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಳೆದ 70 ವರ್ಷಗಳಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವದ ಏಕೈಕ ದೊಡ್ಡ ಸಂಘಟನೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್1949 ಜುಲೈ 9 ರಂದು ಪ್ರಾರಂಭವಾಯಿತು. ಈ ದಿನವನ್ನು“ರಾಷ್ಟ್ರೀಯ ವಿದ್ಯಾರ್ಥಿ ದಿನ”ವನ್ನಾಗಿ ಇಡೀ ದೇಶಾದ್ಯಂತ ವಿದ್ಯಾರ್ಥಿ ಪರಿಷತ್‍ಎಲ್ಲಾ ಶಾಖೆಗಳಲ್ಲಿ ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವತಿಯಿಂದ “ರಾಷ್ಟ್ರೀಯ ವಿದ್ಯಾರ್ಥಿ ದಿವಸ್” ಕಾರ್ಯಕ್ರಮವನ್ನು ಮಂಗಳೂರು ನಗರ ಕಾರ್ಯಾಲಯದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗ ಪ್ರಮುಖರಾದ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಕೇಶವ ಬಂಗೇರಾ ಹಾಗೂ ಮಂಗಳೂರು ನಗರ ಕಾರ್ಯದರ್ಶಿ ವಿಕಾಸ್ ಕಾಟಿಪಾಳ್ಳ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕಿಂತ ಮುಂಚೆ ವಿದ್ಯಾರ್ಥಿ ಪರಿಷತ್ ಧ್ವಜಾರೋಹಣವನ್ನು ಮಾಡಲಾಯಿತು. ಕೇಶವ ಬಂಗೇರ ಅವರು ಮಾತನಾಡಿ ವಿದ್ಯಾರ್ಥಿ ಪರಿಷತ್ತಿನ ಹಿನ್ನೆಲೆ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿಕೊಟ್ಟರು ಅಲ್ಲದೆ ವಿದ್ಯಾರ್ಥಿ ಪರಿಷತ್ತಿನ ಇಂದಿನ ಪ್ರಸ್ತುತತೆ ಮತ್ತು ವಿದ್ಯಾರ್ಥಿಗಳು ಇಂದಿನ ದಿನಗಳಲ್ಲಿ ಯಾವ ರೀತಿಯಾಗಿ ಯೋಚಿಸಬೇಕು, ರಾಷ್ಟ್ರೀಯತೆ ವಿಚಾರದಲ್ಲಿ ಹಾಗೂ ರಾಷ್ಟ್ರದ ಬಗ್ಗೆ ಯಾವ ರೀತಿಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ವಿಷಯಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.

ಕಾರ್ಯಕರ್ತರಾದ ಮಣಿಕಂಠ, ಶ್ರೇಯಸ್, ಸಂಕೇತ್, ತೀಕ್ಷಿತ್, ಪವನ್ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.