ಎರಡು ಬಸ್‌‌ ಗಳ ನಡುವೆ ಡಿಕ್ಕಿ: 50 ಜನರಿಗೆ ಗಾಯ

Spread the love

ಎರಡು ಬಸ್‌‌ ಗಳ ನಡುವೆ ಡಿಕ್ಕಿ: 50 ಜನರಿಗೆ ಗಾಯ

ಬಂಟ್ವಾಳ: ಬಿ.ಸಿ. ರೋಡ್- ಪೊಳಲಿ ರಸ್ತೆಯ ಕಲ್ಪನೆ ತಿರುವಿನಲ್ಲಿ ಎರಡು ಬಸ್‌‌ಗಳ ನಡುವೆ ಡಿಕ್ಕಿ ಸಂಭವಿಸಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿವೆ.

ಎರಡೂ ಬಸ್‌ಗಳು ಬಿ.ಸಿ.ರೋಡ್‌ನಿಂದ ಪೊಳಲಿ ಕಡೆಗೆ ಸಂಚರಿಸುತ್ತಿದ್ದವು. ಒಂದರ ಹಿಂದೊಂದು ಬರುತ್ತಿದ್ದ ಬಸ್‌‌ಗಳು, ಕಲ್ಪನೆ ತಿರುವಿನಲ್ಲಿ ಡಿಕ್ಕಿಯಾಗಿದ್ದು, ಮುಂದಿನಿಂದ ಹೋಗುತ್ತಿದ್ದ ರೂಟ್ ಬಸ್‌‌ಗೆ ಹಿಂದಿನಿಂದ ಬರುತ್ತಿದ್ದ ಮದುವೆ ದಿಬ್ಬಣದ ಬಸ್ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್‌‌ನಲ್ಲಿ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love