ಎರ್ಮಾಯ್ ಫಾಲ್ಸ್‌ನಲ್ಲಿ ಮುಳುಗಿ ‘ಕನಸು’ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ದುರ್ಮರಣ

Spread the love

ಎರ್ಮಾಯ್ ಫಾಲ್ಸ್‌ನಲ್ಲಿ ಮುಳುಗಿ ‘ಕನಸು’ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ದುರ್ಮರಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಕನಸು ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಎಂಬುವರು ಬಲಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿನ ಎರ್ಮಾಯ್ ಫಾಲ್ಸ್ ಗೆ ಫೋಟೋಶೂಟ್ ಗಾಗಿ ಸಂತೋಷ್ ಶೆಟ್ಟಿ ಹಾಗೂ ಸ್ನೇಹಿತರು ಆಗಮಿಸಿದ್ದರು.

ಫೋಟೋ ಶೂಟ್ ಮಾಡುತ್ತಿದ್ದಾಗ ನೀರಿನ ಹರಿವು ಹೆಚ್ಚಾಗಿದ್ದರಿಂದ ಕಾಲುಜಾರಿ ಬಿದ್ದು ಫಾಲ್ಸ್ ನಲ್ಲಿ ಮುಳುಗಿದ್ದಾರೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ಸಂತೋಷ್ ಶೆಟ್ಟಿ ಫೋಟೋ ಶೂಟ್ ಗಾಗಿ ಎರ್ಮಾಯ್ ಫಾಲ್ಸ್ ಗೆ ಬಂದಿದ್ದರು.


Spread the love