ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸಮಯಪ್ರಜ್ಞೆ; ಕಲ್ಲಡ್ಕ ಘಟನೆಗೆ ಸಂಬಂಧಿಸಿ ಬಂಧಿಸಲ್ಪಟ್ಟ ಅಮಾಯಕನ ಬಿಡುಗಡೆ

Spread the love

ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸಮಯಪ್ರಜ್ಞೆ; ಕಲ್ಲಡ್ಕ ಘಟನೆಗೆ ಸಂಬಂಧಿಸಿ ಬಂಧಿಸಲ್ಪಟ್ಟ ಅಮಾಯಕನ ಬಿಡುಗಡೆ

ಮಂಗಳೂರು: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರ ಸೂಕ್ತ ಸಮಯಪ್ರಜ್ಞೆಯ ಪರಿಣಾಮ ಕಲ್ಲಡ್ಕ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆಮಾಯಕ ಯುವಕನೋರ್ವನನ್ನು ಬಂಟ್ವಾಳ ಪೋಲಿಸರು ಬಿಡುಗಡೆ ಮಾಡಿದ್ದಾರೆ.

ಡಿಸೆಂಬರ್ 26 ರಂದು ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿ ಕೇಶವ್ ಎಂಬವರ ಕೊಲೆ ಯತ್ನಕ್ಕೆ ಸಂಬಂಧಿಸಿ ಬಂಟ್ವಾಳ ಪೋಲಿಸರು ವಿಚಾರಣೆಗಾಗಿ ಖಲೀಲ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ಕುರಿತು ಸ್ಪಷ್ಟನೆ ನೀಡಿರುವ ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯವರು ಪೋಲಿಸ್ ವಿಚಾರಣೆಯ ವೇಳೆ ಖಲೀಲ್ ವಿರುದ್ದ ಯಾವುದೇ ರೀತಿಯ ಸಾಕ್ಷಾಧಾರಗಳು ಪ್ರಕರಣಕ್ಕೆ ಸಂಬಂಧಿಸಿ ಲಭ್ಯವಾಗಿಲ್ಲ. ಘಟನೆಯ ವೇಳೆ ಖಲೀಲ್ ಕಲ್ಲಡ್ಕದಲ್ಲಿ ಇರಲಿಲ್ಲ ಎನ್ನುವುದು ಕೂಡ ತಿಳಿದು ಬಂದಿದ್ದು, ಖಲೀಲ್ ಅವರನ್ನು ಬಿಡುಗಡೆ ಗೊಳಿಸಲಾಗಿದೆ ಎಂದರು,


Spread the love