ಎಸ್‍ಕೆಪಿಎ ಉಡುಪಿ ವಲಯ ರಜತ ಸಂಭ್ರಮ ಉಧ್ಘಾಟನೆ

ಎಸ್‍ಕೆಪಿಎ ಉಡುಪಿ ವಲಯ ರಜತ ಸಂಭ್ರಮ ಉಧ್ಘಾಟನೆ

ಉಡುಪಿ: ಛಾಯಗ್ರಾಹಕರ ಸೇವೆ ಸಮಾಜದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಸಹಕಾರಿ ದುರೀಣ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಜಗನ್ನಾಥ ಸಭಾಭವನದಲಿ ಅಯೋಜಿಸಿದ್ದ ರಜತ ಸಂಭ್ರಮದ ಉಧ್ಘಾಟನಾ ಸಮಾರಂಭ ಹಾಗು ಲಾಂಛನ ಬಿಡುಗಡೆಗೂಳಿಸಿ ಮಾತನಾಡಿದರು.

ಬಳಿಕ ನಡೆದ 25ನೇ ವಾರ್ಷಿಕ ಮಹಾಸಭೆಯು ವಲಯಾಧ್ಯಕ್ಷ ಅನೀಶ್ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್‍ಕೆಪಿಎ ಮಾತೃಸಂಸ್ಥೆ ಜಿಲ್ಲಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ಮಾತನಾಡಿ ನಾವು ಸಂಘಟಿತರಾಗಿ ಮಾಡಿದ ಕೆಲಸದಿಂದ ನಮ್ಮ ಸಂಘಟನೆ ಬೆಳೆಯುವುದಲ್ಲದೆ ನಾವೆಲ್ಲರೂ ಬೆಳೆಯುತ್ತೇವೆ ಎಂದರು. ಸದಸ್ಯರಿಗೊಸ್ಕರ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದಿಸಲಾಯಿತು. ವೈದ್ಯಕೀಯ ನೆರವು, ಕಲಿಕಾ ಪ್ರೋತ್ಸಾಹ, ನೂತನ ಸದಸ್ಯರ ಸೇರ್ಪಡೆ, ಗುರುತಿಸಿವಿಕೆ ಹಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತೃ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಕೋಶಾಧಿಕಾರಿ ಶ್ರೀಧರ ಶೆಟ್ಟಿಗಾರ್, ಸಂಚಾಲಕ ವಿಠಲ್ ಚೌಟ, ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಕೊರೆಯ, ಮಾಜಿ ಅಧ್ಯಕ್ಷ ಕೆ. ವಾಸುದೇವ ರಾವ್, ಉಪಾಧ್ಯಕ್ಷ ಗಣೇಶ್ ಕುಮಾರ್, ನವೀನ್ ಬಲ್ಲಾಳ್, , ಚಂದ್ರಕಾಂತ್ ಹಿರಿಯಡಕ, ಪ್ರಕಾಶ್ ಶೆಟ್ಟಿ ಪರೀಕ, ಸುಕುಮಾರ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು.

ಜಯಕರ ಸುವರ್ಣ ಪ್ರಸ್ತಾಪಿಸಿದರು. ಪ್ರಸನ್ನ ಹಬ್ಬಾರ್ ಸ್ವಾಗತಿಸಿದರು. ಜನಾರ್ದನ್ ಕೊಡವೂರು ವಮದಿಸಿದರು. ಉಡುಪಿ ವಲಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕಾಂಚನ್ ವರದಿ ವಾಚಿಸಿ, ಕೋಶಾಧಿಕಾರಿ ಮಂಜುನಾಥ ದೇವಾಡಿಗ ಲೆಕ್ಕಪತ್ರ ಮಂಡಿಸಿದರು. ರಾಘವೇಂದ್ರ ಸೇರಿಗಾರ್ ನಿರೂಪಿಸಿದರು.