ಎ. 28: ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ ಮಂಗಳೂರಿಗೆ

Spread the love

ಎ. 28: ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ ಮಂಗಳೂರಿಗೆ

ಮಂಗಳೂರು: ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ಹೊರಗಿಡುವ ಹೋರಾಟದ ಭಾಗವಾಗಿ ಹಿರಿಯ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ, ಹಿರಿಯ ಚಿಂತಕ, ಹೋರಾಟಗಾರ ಎ.ಕೆ. ಸುಬ್ಬಯ್ಯರವರ ನೇತೃತ್ವ ಹಾಗೂ ರಾಜ್ಯದ ಹಲವು ಪ್ರಗತಿಪರ, ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ “ಸಂವಿಧಾನ ಉಳಿವಿಗಾಗಿ ಕರ್ನಾಟಕ” ಎಂಬ ಜನಜಾಗೃತಿ ಆಂದೋಲನವು ರಾಜ್ಯಾದ್ಯಂತ ನಡೆಯುತ್ತಿದೆ

ಈ ಆಂದೋಲದ ಭಾಗವಾಗಿ ಎ. 28 ರಂದು ದ.ಕ. ಜಿಲ್ಲೆಯ ಬಂಟ್ವಾಳ ಮತ್ತು ತೊಕ್ಕೊಟ್ಟಿನಲ್ಲಿ ಬಹಿರಂಗ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಮಾವೇಶದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ, ಪ್ರಕಾಶ್ ರೈ ಮತ್ತಿತರ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.


Spread the love