ಐವಾನ್ ಡಿಸೋಜಾ ಗೆ ಕೊರೋನಾ ಪಾಸಿಟಿವ್ – ಪತ್ರಕರ್ತರಿಗೆ ಸ್ವಯಂ ಕ್ವಾರಂಟೈನ್ ಆಗಲು ಡಿಸಿ ಸೂಚನೆ

Spread the love

ಐವಾನ್ ಡಿಸೋಜಾ ಗೆ ಕೊರೋನಾ ಪಾಸಿಟಿವ್ – ಪತ್ರಕರ್ತರಿಗೆ ಸ್ವಯಂ ಕ್ವಾರಂಟೈನ್ ಆಗಲು ಡಿಸಿ ಸೂಚನೆ

ಮಂಗಳೂರು: ಜಿಲ್ಲೆಯ ಮಾಜಿ ಶಾಸಕರೊಬ್ಬರಿಗೆ ಕೋವಿಡ್-19 ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಅವರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಹಾಜರಿದ್ದ ಪತ್ರಕರ್ತರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಲೂ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಮಾಜಿ ಶಾಸಕ ಐವಾನ್ ಡಿಸೋಜಾರಿಗೆ ಕೋವಿಡ್ ದೃಢಪಟ್ಟಿದ್ದು, ದಿನಾಂಕ 31-07- 2020 ರಂದು ಸದರಿಯವರು ಪಾಲ್ಗೊಂಡ ಕಾರ್ಯಕ್ರಮಗಳಲ್ಲಿ ಪತ್ರಕರ್ತರು ನಿಕಟ ಅಂತರದಲ್ಲಿ ಭಾಗವಹಿಸಿರುವ ಮಾಹಿತಿ ಬಂದಿರುತ್ತದೆ. ಮುನ್ನೆಚ್ಚರಿಕಾ ಕ್ರಮವಾಗಿ, ಇವರ ಸಮೀಪ ಸಂಪರ್ಕಕ್ಕೆ ಹೋದ ಎಲ್ಲಾ ಪತ್ರಕರ್ತರು ಸ್ವಯಂ ಕ್ವಾರೆಂಟೈನ್ ಗೊಳಗಾಗಲು ಕೋರಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆಯಂತೆ, ಈ ಎಲ್ಲಾ ಪತ್ರಕರ್ತರು ತಮ್ಮ ಆರೋಗ್ಯ ಬಗ್ಗೆ ನಿಕಟವಾಗಿ ಗಮನಿಸಿ, ಏನಾದರೂ ಲಕ್ಷಣಗಳು ( symptoms) ಕಂಡು ಬಂದಲ್ಲಿ ಆಸ್ಪತ್ರೆಯನ್ನು ತಕ್ಷಣ ಸಂಪರ್ಕಿಸಬೇಕು. ಹೊರಗಡೆ ಓಡಾಟ ನಿರ್ಬಂಧಿಸಲು ಸೂಚಿಸಲಾಗಿದ್ದು ಆದರೆ ಯಾವುದೇ ಗಾಬರಿಪಡುವ ಅಗತ್ಯವಿಲ್ಲ. ಸಹಕರಿಸಲು ಕೋರಲಾಗಿದೆ.


Spread the love