ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾಗಿ ಡಿಯೋನ್ ಡಿಸೋಜಾ ಆಯ್ಕೆ

Spread the love

ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾಗಿ ಡಿಯೋನ್ ಡಿಸೋಜಾ ಆಯ್ಕೆ

ಉಡುಪಿ: ಭಾರತೀಯ ಕೆಥೊಲಿಕ್ ಯುವ ಸಂಚಾಲನ (ಐಸಿವೈ ಎಮ್) ಉಡುಪಿ ದರ್ಮಪ್ರಾಂತ್ಯ ಇದರ 2018-19 ನೇ ನೂತನ ಅಧ್ಯಕ್ಷರಾಗಿ ಕಲ್ಮಾಡಿ ಧರ್ಮಕೇಂದ್ರದ ಡಿಯೋನ್ ಡಿಸೋಜಾ ಹಾಗೂ ಕಾರ್ಯದರ್ಶಿಯಾಗಿ ಮೂಡುಬೆಳ್ಳೆ ಧರ್ಮಕೇಂದ್ರದ ಸಾರಾ ಡಿಸೋಜಾ ಆಯ್ಕೆಯಾಗಿದ್ದಾರೆ.

ಉಡುಪಿ ಶೋಕಮಾತಾ ಇಗರ್ಜಿ ಇದರ ಡೋನ್ ಬೊಸ್ಕೊ ಸಭಾಂಗಣದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ನಿರ್ದೇಶಕರಾದ ವಂ. ಎಡ್ವಿನ್ ಡಿಸೋಜಾ’ಅವರು ನೂತನ ಪದಾಧಿಕಾರಿಗಳ ಚುನಾವಣೆಯನ್ನು ನೆರವೇರಿಸಿದರು.

ಇತರ ಪದಾಧಿಕಾರಿಗಳಾಗಿ ಈ ಕೆಳಗಿನವರು ಆಯ್ಕೆಯಾಗಿದ್ದಾರೆ. ಮೆಲ್ ರೊಯ್ ಡಿಸಿಲ್ವಾ, ಸ್ಯಾಂಡ್ರಾ ರೆಬೆರೊ (ಉಪಾಧ್ಯಕ್ಷರು), ಲಿನೆಟ್ ಕರ್ವಾಲ್ಲೊ (ಸಹಕಾರ್ಯದರ್ಶಿ), ಜೀವನ್ ಡಿಸೋಜಾ (ಕೋಶಾಧಿಕಾರಿ), ನೀಲ್ ಅಬ್ರಾಹಾಂ ಬಾರ್ನೆಸ್ (ಲೆಕ್ಕಪರಿಶೋಧಕ), ಮೈಕಲ್ ಡಿಸೋಜಾ(ಪಿಆರ್ ಓ), ಎಲ್ಸನ್ ಡಿಸೋಜಾ, ರೋಶನಿ ಲಿನೆಟ್ ಕ್ವಾಡ್ರಸ್(ನಾಮನಿರ್ದೇಶಿತ ಸದಸ್ಯರು), ಒನಿಲ್ ಅಂದ್ರಾದೆ, ಶೈನಿ ಆಳ್ವಾ (ಪ್ರಾಂತ್ರೀಯ ಪ್ರತಿನಿಧಿಗಳು), ಅ್ಯರಲ್ ಅಲ್ಡ್ರೀನ್ ಜೋನ್ ಡಿಸೋಜಾ(ಕಲ್ಯಾಣಪುರ ವಲಯಾಧ್ಯಕ್ಷ), ಕ್ಲಿಂಟನ್ ಕಾರ್ಡೋಜಾ(ಕಾರ್ಕಳ ವಲಯಾಧ್ಯಕ್ಷ), ಜಾಕ್ಸನ್ ಕಾಬ್ರಾಲ್ (ಶಿರ್ವ ವಲಯಾಧ್ಯಕ್ಷ), ವಿಲ್ಟನ್ ಡಿಸೋಜಾ(ಉಡುಪಿ ವಲಯಾಧ್ಯಕ್ಷ), ಆಲ್ಡ್ರೀನ್ ಡಿಸೋಜಾ (ಕುಂದಾಪುರ ವಲಯಾಧ್ಯಕ್ಷ), ಶರ್ಲಿನ್ ಡೆಸಾ (ನಿಕಟಪೂರ್ವ ಅಧ್ಯಕ್ಷೆ) ಲೆಸ್ಲಿ ಆರೋಜಾ(ಸಲಹೆಗಾರು).

ಚುನಾವಣೆಯ ಬಳಿಕ ನೂತನ ಪದಾಧಿಕಾರಿಗಳಿಗೆ ವಂ.ಎಡ್ವಿನ್ ಡಿಸೋಜಾ ಪ್ರತಿಜ್ಞಾ ವಿಧಿ ಭೋಧಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸೇವೆ ಆಯೋಗದ ನಿರ್ದೇಶಕ ವಂ ರೆಜಿನಾಲ್ಡ್ ಪಿಂಟೊ ಮಾತನಾಡಿ ಯುವನಾಯಕರು ಯುವಜನರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುವಂತೆ ಕರೆ ನೀಡಿದರು.

ಕಾರ್ಯಕ್ರಮವು ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಗಿ, ಬಳಿಕ ಪಾದ್ವಾ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ವಂ ಆಲ್ವಿನ್ ಸೆರಾವೊ ಪದಾಧಿಕಾರಿಗಳಿಗೆ ತರಬೇತಿಯನ್ನು ನೀಡಿದರು.

ನಿಕಟಪೂರ್ವ ಅಧ್ಯಕ್ಷೆ ಶರ್ಲಿನ್ ಡೆಸಾ ಸ್ವಾಗತಿಸಿ, ರೆನ್ಸನ್ ಆಳ್ವಾ ವಾರ್ಷಿಕ ವರದಿಯನ್ನು ಮಂಡಿಸಿದರು. ನೂತನ ಅಧ್ಯಕ್ಷ ಡಿಯೋನ್ ಡಿಸೋಜಾ ವಂದಿಸಿದರು. ಸ್ಟೆಫಿ ಲವಿನಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.


Spread the love