ಓಖಿ ಚಂಡಮಾರುತದ ಆರ್ಭಟ: ಉಳ್ಳಾಲಕ್ಕೆ ಐವನ್ ಭೇಟಿ

Spread the love

ಓಖಿ ಚಂಡಮಾರುತದ ಆರ್ಭಟ: ಉಳ್ಳಾಲಕ್ಕೆ ಐವನ್ ಭೇಟಿ

ಮಂಗಳೂರು: ಓಖಿ ಚಂಡಮಾರುತದ ಆರ್ಭಟಕ್ಕೆ – ಉಳ್ಳಾಲದ ಮುಕಚ್ಚೀರಿ ಸಿ.ಗ್ರೌಂಡ್,ಹಿಲೇರಿನಗರ ಇಲ್ಲಿಗೆ ಸರ್ಕಾರ ಮುಖ್ಯ ಸಚೇತರದ   ಐವನ್ ಡಿ’ ಸೋಜಾ ರವರು ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

ಓಖಿ ಚಂಡಮಾರುತ ಆರ್ಭಟಕ್ಕೆ ಉಳ್ಳಾಲದ ಮುರಚ್ಚೀರಿ,ಸಿ.ಗ್ರೌಂಡ್ ಹಿಲೇರಿನಗರದಲ್ಲಿ ಮನೆಗಳಿಗೆ ಹಾನಿಯಾಗಿದ್ದು ಮತ್ತು ಸಾರ್ವಜನಿಕ ಆಸ್ತ್ತಿ ಪಾಸ್ತಿಗಳು  ನಾಶವಾಗಿದ್ದು. ಮಂಗಳೂರಿನ ಜಿಲ್ಲಾಧಿಕಾರಿಗಳಾದ  ಶಶಿಕಾಂತ್ ಶಿಂಧಿ ಅಪರ ಜಿಲ್ಲಾಧಿಕಾರಿಗಳಾದ  ಕುಮಾರ್ ಹಾಗೂ ಮಂಗಳೂರು ತಾಲೂಕು ಎ.ಸಿ ಯವರಾದ    ರೇಣುಕ ಪ್ರಸಾದ್ ಇವರೊಂದಿಗೆ ಓಖಿ ಚಂಡ ಮಾರುತದಿಂದ ಆದ ಅನಾಹುತಗಳ ಬಗ್ಗೆ ಮಾಹಿತಿ ಪಡೆದರು. ಮನೆ ಕಳೆದುಕೊಂಡ ಅವರಿಗೆ ಪುರ್ನಾವಸತಿಯನ್ನು. ಕಲ್ಪಿಸಬೇಕು ಮತ್ತು ಮುಂಜಾಗೃತ ಕ್ರಮವನ್ನು ಕೈಗೊಳ್ಳಬೇಕು ಹಾಗು ಸರ್ಕಾರದಿಂದ ಸಿಗುವಂತ ಸವಾಲತ್ತುಗಳನ್ನು ಅತೀ ಶೀಘ್ರದಲ್ಲಿ ನೀಡಬೆಕೇಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ನಾಮ ನಿರ್ದೇಶಕರಾದ. ಪಿಯುಸ್, ಮೊಂತೋರೂ, ಸುರೇಶ ಭಟ್ ನಗರ, ದೀಪಕ್, ಪಿಲಾರು, ಬಾಜಿಲ್ ಡಿ’ಸೋಜಾ. ಸ್ಥಳೀಯ ನಾಯಕರು ಮತ್ತು ಸಾರ್ವಜನಿಕರು ಇದ್ದರು.


Spread the love