ಓದಲು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ 5ನೇ ತರಗತಿ ವಿದ್ಯಾರ್ಥಿನಿ !

ಓದಲು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ 5ನೇ ತರಗತಿ ವಿದ್ಯಾರ್ಥಿನಿ !

ಮಂಗಳೂರು: ಪರೀಕ್ಷೆಗೆ ಓದಲು ಹೇಳಿದ್ದಕ್ಕೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಾವೇರಿ ಬಳಿಯ ಕಮ್ಮಜೆ ಎಂಬಲ್ಲಿ ನಡೆದಿದೆ.

ಶ್ರೀಲತಾ ಎಂಬುವರ 10 ವರ್ಷದ ಮಗಳು, ಧ್ರುವಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಕಿನ್ನಿಗೋಳಿಯ ಮೇರಿವೆಲ್ ಶಾಲೆಯಲ್ಲಿ ಆಕೆ 5ನೇ ತರಗತಿ ಓದುತ್ತಿದ್ದಳು. ಬುಧವಾರ ಸ್ಥಳೀಯ ಚರ್ಚ್ ನಲ್ಲಿ ಉತ್ಸವವಿದ್ದ ಕಾರಣ ಶಾಲೆಗೆ ರಜೆ ಘೋಷಿಸಲಾಗಿತ್ತು.

ಕೆಲ ಕಾಲ ಧ್ರುವಿ ಟಿ.ವಿ. ನೋಡುತ್ತಿದ್ದು, ಕರೆಂಟ್ ಹೋದ ಕಾರಣ, ಪರೀಕ್ಷೆಗೆ ಓದಿಕೊಳ್ಳುವಂತೆ ಅಜ್ಜಿ ತಿಳಿಸಿದ್ದಾರೆ. ರೂಮಿಗೆ ಹೋಗಿ ಸೇರಿಕೊಂಡ ಆಕೆ ಎಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ.

ಅನುಮಾನಗೊಂಡು ಕೋಣೆಯೊಳಗೆ ನೋಡಿದಾಗ, ಕೋಣೆಯ ಕಿಟಕಿಗೆ ಕೂದಲಿಗೆ ಹಾಕಿಕೊಳ್ಳುವ ರಿಬ್ಬನ್ ಹಾಕಿಕೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.