ಓಮಾನ್‍ನಲ್ಲಿ ಬಂಟರ ಐಸಿರಿ 2018

Spread the love

ಓಮಾನ್‍ನಲ್ಲಿ ಬಂಟರ ಐಸಿರಿ 2018

ಓಮಾನ್: ಓಮಾನ್‍ನಲ್ಲಿ ನೆಲೆಸಿರುವ ಬಂಟ ಸಮುದಾಯದ 31ನೇ ವರ್ಷದ ಓಮಾನ್ ಬಂಟರ ಐಸಿರಿ 2018 ವಾರ್ಷಿಕ ಕೂಟವು ಮಸ್ಕತ್ ಅಲೆಫಾಲಾಜ್ ಹೊಟೇಲ್ ನ ‘ಲೀ ಗ್ರಾಂಡ್ ಹಾಲ್’ನಲ್ಲಿ ನೆರವೇರಿತು. ಕಾರ್ಯಕ್ರಮದ ಸಾರಥ್ಯವನ್ನು ಬಂಟರ ಐಸಿರಿ 2018ರ ಸಮಿತಿಯು ಬಹಳ ಅಚ್ಚುಕಟ್ಟಾಗಿ ಮುನ್ನಡೆಸಿತು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ, ವಿಶ್ವ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಚಂದ್ರಿಕಾ ಹರೀಶ್ ಶೆಟ್ಟಿ ಹಾಗೂ ಮುಂಬಯಿ ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕøತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಉಪಸ್ಥಿತರಿದ್ದರು.

ಮಮತಾ ಪ್ರಕಾಶ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಅತಿಥಿಗಳ ಸನ್ಮಾನವನ್ನು ಕಾಪು ಮಲ್ಲಾರ್ ದಿವಾಖರ್ ಶೆಟ್ಟಿ ಹಾಗೂ ಕಾಪು ಮಲ್ಲಾರ್ ಶಶಿಧರ ಶೆಟ್ಟಿ ದಂಪತಿಗಳು ನೆರವೇರಿಸಿದರು.ಕಾರ್ಯಕ್ರಮವು ಬೆಳಿಗ್ಗೆ 8.00ಗಂಟೆಗೆ ವೈವಿಧ್ಯಮಯ ಸಾಂಸ್ಕøತಿ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ ನಡೆಯಿತು.

ಸಾಂಸ್ಕøತಿಕ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ತುಳುವಸಿರಿ ಅದ್ವಿಕಾ ಶೆಟ್ಟಿ ಹಾಗೂ ಮುಂಬಯಿಯ ಆಶ್ರಿತಾ ಹಾಗೂ ಅಶ್ಮಿತಾ ಸಹೋದರಿಯರು ನೃತ್ಯದಿಂದ ನೆರೆದ ಜನ ಸಮೂಹವನ್ನು ರಂಜಿಸಿದರು. ತುಳುಚಿತ್ರ ನಟಿ ನಿರೀಕ್ಷಾ ಶೆಟ್ಟಿ ಪುತ್ತೂರು ಮತ್ತು ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.ಅಶೋಕ ಶೆಟ್ಟಿ ಸುರತ್ಕಲ್ ವಂದಿಸಿದರು.


Spread the love