ಕಂಡ್ಲೂರು; ಅಕ್ರಮ ಮರಳು ಅಡ್ಡೆಗೆ ದಾಳಿ; ನಾಲ್ವರ ಬಂಧನ

Spread the love

ಕಂಡ್ಲೂರು; ಅಕ್ರಮ ಮರಳು ಅಡ್ಡೆಗೆ ದಾಳಿ; ನಾಲ್ವರ ಬಂಧನ

ಕುಂದಾಪುರ : ಕಾವ್ರಾಡಿ ಗ್ರಾಮದ ಕಂಡ್ಲೂರಿನ ಜೆ ಎಂ ರಸ್ತೆಯ ವಾರಾಹಿ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಭಾನುವಾರ ಬೆಳಗಿನ ಜಾವ ದಾಳಿ ನಡೆಸಿದ ಕುಂದಾಪುರ ಗ್ರಾಮಾಂತರ ಠಾಣಾ ಎಸ್ ಐ ಶ್ರೀಧರ್ ನಾಯ್ಕ್ ನೇತೃತ್ವದ ತಂಡ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಂಡ್ಲೂರಿನ ನಿಸಾರ್ ಅಹಮದ್ (32), ಖಲೀಫಾ ಖಾಲಿದ್ (30), ಖಲೀಫಾ ಖುರೇಶಿ (46), ಹಾವೇರಿ ಜಿಲ್ಲೆಯ ವಿರೂಪಾಕ್ಷ ಯಾನೆ ಹರೀಶ (48) ಗುರುತಿಸಲಾಗಿದೆ.

ಸ್ಥಳದಲ್ಲಿದ್ದ ಕಂಡ್ಲೂರಿನ ಬಿಲಾಲ್, ಸಮೀರ್, ಅಫಾನ್, ಹಾಗೂ ಮುತಾಯಿಬ್ ಪರಾರಿಯಾಗಿದ್ದಾರೆ.

ಬಂಧಿತ ಆರೋಪಿ ನಿಸಾರ್ ಅಹಮದ್ ವಶದಿಂದ ಮರಳು ಸಾಗಾಟ ಮಾಡಿ ಮಾರಾಟ ಮಾಡಿ ಸಂಗ್ರಹಿಸಿರುವ ನಗದು ರೂಪಾಯಿ 37,000/-, ಹಾಗೂ 1) SAMSUNG J5 PRIME ಮಾದರಿಯ ಹಾಗೂ 2) ಕಪ್ಪು ಬಣ್ಣದ SAMSUNG DUOS ಮಾದರಿಯ ಮೊಬೈಲ್ ಫೋನ್ಗಳು ( ಮೌಲ್ಯ ರೂಪಾಯಿ 10,000/-), ಆರೋಪಿತ ಖಲೀಫಾ ಖಾಲಿದ್ ವಶದಲ್ಲಿ KARBONN K26 ಮಾದರಿಯ ಕೆಂಪು, ಕಪ್ಪು ಬಣ್ಣದ ಮೊಬೈಲ್ ಫೋನ್-1 ( ರೂಪಾಯಿ 2,000/-), ಆರೋಪಿತ ಖಲೀಫಾ ಖುರೇಶಿಯ ವಶದಲ್ಲಿ ಸಿಲ್ವರ್ ಬಣ್ಣದ SAMSUNG Glaxy J2 ಮಾದರಿಯ ಮೊಬೈಲ್ ಫೋನ್-1 (ಮೌಲ್ಯ ರೂಪಾಯಿ 7,000/-) ಹಾಗೂ ಮರಳು ಮಾರಾಟದಿಂದ ಸಂಗ್ರಹಿಸಿದ ನಗದು ರೂಪಾಯಿ 360/-, ಆರೋಪಿತ ವಿರೂಪಾಕ್ಷ @ ಹರೀಶನ ವಶದಲ್ಲಿ ಕಪ್ಪು ಬಣ್ಣದ NOKIA ಕಂಪೆನಿಯ ಮೊಬೈಲ್ ಫೋನ್ -1 (ಮೌಲ್ಯ ರೂಪಾಯಿ 500/-) ಸ್ವಾಧೀನಪಡಿಸಿಕೊಳ್ಳಾಗಿರುತ್ತದೆ. ಸ್ಥಳದಲ್ಲಿ ಚೀಲಗಳಲ್ಲಿ ಕಟ್ಟಿ ಸಂಗ್ರಹಿಸಿಟ್ಟಿದ್ದ 3 ಯುನಿಟ್ಗಳಷ್ಟು ಸಾಮಾನ್ಯ ಮರಳನ್ನು,(ಮೌಲ್ಯ ರೂಪಾಯಿ.10,000/-),ಮತ್ತು KA-20-D-0841 ನೇ ಪಿಕಪ್ ವಾಹನವನ್ನು (ಮೌಲ್ಯ ರೂಪಾಯಿ.4,00,000/-) ಹಾಗೂ ಅದರಲ್ಲಿದ್ದ 1 ಯುನಿಟ್ ಮರಳು (ಮೌಲ್ಯ ರೂಪಾಯಿ 3,500/-) ಮತ್ತು KA-12-A-1323 ನೇ ಪಿಕಪ್ ವಾಹನವನ್ನು ( ಮೌಲ್ಯ ರೂಪಾಯಿ. 3,00,000/-) ಮತ್ತು KA-02-Z-2404 ನೇ ಮಾರುತಿ ಓಮ್ನಿ ವ್ಯಾನ್ ( ಮೌಲ್ಯ ರೂಪಾಯಿ 1,00,000/-) ಗಳನ್ನು, ಪಕ್ಕದಲ್ಲಿಯೆ ನದಿಯಲ್ಲಿ ನಿಲ್ಲಿಸಿದ್ದ ಮರಳು ಸಂಗ್ರಹಕ್ಕೆ ಬಳಸಿದ ದೋಣಿ (ಮೌಲ್ಯ ರೂಪಾಯಿ. 25,000/-), KA-12-A-1323 ನೇ ಪಿಕಪ್ ವಾಹನದಲ್ಲಿದ್ದ 2 ಪ್ಲಾಸ್ಟಿಕ್ ಬುಟ್ಟಿ (ಮೌಲ್ಯ ರೂಪಾಯಿ -100/-) ಹಾಗೂ KA-02-Z-2404 ನೇ ಮಾರುತಿ ಓಮ್ನಿ ವಾಹನದಲ್ಲಿದ್ದ 1 ಸಲಿಕೆ (ಮೌಲ್ಯ ರೂಪಾಯಿ-200) ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 8,95,660 ಆಗಿರುತ್ತದೆ.

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love