ಕಂಬಳದ ಉಸೇನ್​ ಬೋಲ್ಟ್ ಶ್ರೀನಿವಾಸಗೌಡ ರನ್ನು ಸನ್ಮಾನಿಸಿದ ಯಡಿಯೂರಪ್ಪ

ಕಂಬಳದ ಉಸೇನ್​ ಬೋಲ್ಟ್ ಶ್ರೀನಿವಾಸಗೌಡ ರನ್ನು ಸನ್ಮಾನಿಸಿದ ಯಡಿಯೂರಪ್ಪ

ಬೆಂಗಳೂರು: ಕಂಬಳದ ಉಸೇನ್​ ಬೋಲ್ಟ್​ ಎಂದೇ ಖ್ಯಾತಿ ಪಡೆದಿರುವ ಶ್ರೀನಿವಾಸಗೌಡರನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಸನ್ಮಾನಿಸಿದರು.

ಕಂಬಳ ಓಟದಲ್ಲಿ ಅದ್ವಿತೀಯ ಸಾಧನೆ ಮಾಡಿದ ಶ್ರೀನಿವಾಸಗೌಡರನ್ನು ಸನ್ಮಾನಿಸಿದ್ದು ನನಗೆ ಸಂತಸ ಉಂಟು ಮಾಡಿದೆ. ಇವರ ಸಾಧನೆ ಗಮನಿಸಿದ ಕೇಂದ್ರ ಸರ್ಕಾರ ಒಲಂಪಿಕ್​ನಲ್ಲಿ ಅವಕಾಶ ಕಲ್ಪಿಸಲು ಮಾರ್ಗದರ್ಶನ ನೀಡಲು ಮುಂದೆ ಬಂದಿದೆ. ಕಾರ್ಮಿಕ ಇಲಾಖೆ ಶ್ರೀನಿವಾಸಗೌಡರಿಗೆ 3 ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡಲಿದೆ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದರು.

ಇವರು ಕಂಬಳ ಓಟದಲ್ಲಿ ಮಾಡಿರುವ ಸಾಧನೆಯನ್ನು ಇಡೀ ದೇಶವೇ ಗಮನಿಸಿದೆ. ಇವರ ಸಾಧನೆ ಸ್ಮರಿಸುವಂತದ್ದು ಎಂದು ಅವರು ಹೇಳಿದರು.