ಕಟಪಾಡಿ: ಅಲ್ಪಸಂಖ್ಯಾತರಿಗೆ ಲಭಿಸುವ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ

ಕಟಪಾಡಿ: ಅಲ್ಪಸಂಖ್ಯಾತರಿಗೆ ಲಭಿಸುವ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ

ಕಟಪಾಡಿ: ಸಂತ ವಿನ್ಸೆಂಟ್ ದಿ ಪಾವ್ಲ್ ದೇವಾಲಯ ಕಟಪಾಡಿ ಇದರ ಕೆಥೊಲಿಕ್ ಸಭಾ ಘಟಕ ಮತ್ತು ಶಿಕ್ಷಣ ಮತ್ತು ಶ್ರೀಸಾಮಾನ್ಯ ಆಯೋಗ ಇವರುಗಳ ಜಂಟಿ ಆಶ್ರಯದಲ್ಲಿ ಭಾನುವಾರ ಚರ್ಚಿನ ಸಭಾಂಗಣದಲ್ಲಿ ಅಲ್ಪಸಂಖ್ಯಾತರಿಗೆ ಲಭಿಸುವ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ ಆಯೋಜಿಸಲಾಗಿತ್ತು.

ಮಾಹಿತಿ ಶಿಬಿರವನ್ನು ಚರ್ಚಿನ ಧರ್ಮಗುರುಗಳಾದ ವಂ. ರೋನ್ಸನ್ ಡಿಸೋಜಾ’ಉದ್ಘಾಟಿಸಿ ಕ್ರೈಸ್ತ ಸಮುದಾಯಕ್ಕೆ ಸರಕಾರ ವಿವಿಧ ಸವಲತ್ತುಗಳನ್ನು ನೀಡಿದ್ದು ಅದನ್ನು ಉಪಯೋಗಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದು ಇರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ನಿಗಮದ ಅಧಿಕಾರಿ ಮುಮ್ತಾಜ್ ಅವರು ಅಲ್ಪಸಂಖ್ಯಾತರಿಗೆ ನೀಡಲಾಗುವ ಸರಕಾರಿ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

ಕಟಪಾಡಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಸುವಾರಿಸ್, ಕಾರ್ಯದರ್ಶಿ ಕ್ಯಾಥರಿನ್ ರೊಡ್ರಿಗಸ್, 18 ಆಯೋಗಗಳ ಸಂಚಾಲಕ ವಿಲ್ಫ್ರೇಡ್ ಲೂವಿಸ್, ಮತ್ತು ಶಿಕ್ಷಣ ಆಯೋಗ ಮತ್ತು ಕೆಥೊಲಿಕ್ ಸಭಾ ಕಟಪಾಡಿ ಘಟಕದ ಅಧ್ಯಕ್ಷರಾದ ಬ್ರಾಯೆನ್ ಕೊರೆಯ ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಕಾರ್ಯದರ್ಶಿ ಐಡಾ ಫುರ್ಟಾಡೊ ಸ್ವಾಗತಿಸಿ ಅಧ್ಯಕ್ಷರಾದ ಬ್ರಾಯೆನ್ ಕೊರೆಯ ವಂದಿಸಿದರು.