ಕಡಬ : ಅಕ್ರಮ ಗೋ ಸಾಗಾಟ, ಜಾನುವಾರು, ವಾಹನ ವಶ

ಕಡಬ : ಅಕ್ರಮ ಗೋ ಸಾಗಾಟ, ಜಾನುವಾರು, ವಾಹನ ವಶ

ಕಡಬ :ಅಕ್ರಮವಾಗಿ ಪಿಕಪ್ ವಾಹನದಲ್ಲಿ ಜಾನಾವಾರು ಸಾಗಾಟ ಮಾಡುತ್ತಿದ್ದ ವೇಳೆ ವಾಹನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಕಡಬದಲ್ಲಿ ನಡೆದಿದೆ.

ಮೇ 21 ರಂದು ಬೀಟ್ ಕರ್ತವ್ಯ ದಲ್ಲಿ ಕಡಬ ತಾಲೂಕು ಕೊಯಿಲ ಗ್ರಾಮದ ಗೋಳತ್ತಡಿ – ಕುದ್ಲೂರು ಸಾರ್ವಜನಿಕ ಡಾಮಾರು ರಸ್ತೆಯ ನೆಲ್ಯೊಟ್ಟು ಎಂಬಲ್ಲಿ ತೆರೆದ ಪಿಕಪ್ ವಾಹನವೊಂದರಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಕಂಡು ಬಂದಿದ್ದನ್ನು ಠಾಣಾ ಸ್ಥಿರ ದೂರವಾಣಿಗೆ ಕರೆ ಮಾಡಿ ತಿಳಿಸಿದಂತೆ ಠಾಣಾ ಪ್ರಭಾರದಲ್ಲಿದ್ದ ಎಎಸ್ಐ ಚಂದ್ರಶೇಖರ ರವರು ಠಾಣೆಯಲ್ಲಿದ್ದ ಸಿಬ್ಬಂದಿಗಳೊಂದಿಗೆ ಖಾಸಗಿ ಜೀಪೊಂದರಲ್ಲಿ ಪಂಚಾಯತುದಾರರನ್ನು ಬರಮಾಡಿಕೊಂಡು ಸದ್ರಿ ಸ್ಥಳಕ್ಕೆ 7.15 ಗಂಟೆಗೆ ತೆರಳಿ ಪಂಚರ ಸಮಕ್ಷಮ ನೋಡಲಾಗಿ ಪಿಕಪ್ ನಂಬ್ರ KL-13-X-7090 ನೇಯದಾಗಿದ್ದು, ಅದರ ಒಳಗಡೆ ಪರಿಶೀಲಿಸಲಾಗಿ ಒಂದು ದನ , ಒಂದು ಹೋರಿ ಯನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು, ಪಿಕಪ್ ಚಾಲಕ ಮೊಹಮ್ಮದ್ ಇಕ್ಬಾಲ್ (38ವರ್ಷ) ಅವರಲ್ಲಿ, ಜಾನುವಾರು ಸಾಗಾಟಕ್ಕೆ ಯಾವುದೇ ಪರವಾನಿಗೆ ಇಲ್ಲವಾಗಿ ತಿಳಿಸಿರುತ್ತಾರೆ. ವಶಪಡಿಸಿಕೊಂಡ ಜಾನುವಾರುಗಳ ಅಂದಾಜು ಮೌಲ್ಯ ರೂ 5000/- ಹಾಗೂ ಪಿಕಪ್ ವಾಹನದ ಅಂದಾಜು ಮೌಲ್ಯ ರೂ 2,00,000/- ಆಗಬಹುದಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.