ಕಡಲಿಗೆ ಬಿದ್ದ ಪುತ್ತೂರಿನ ಯುವಕನನ್ನು ರಕ್ಷಿಸಿದ ಸ್ಥಳೀಯ ಮೊಗವೀರ ಯುವಕರು

Spread the love

ಕಡಲಿಗೆ ಬಿದ್ದ ಪುತ್ತೂರಿನ ಯುವಕನನ್ನು ರಕ್ಷಿಸಿದ ಸ್ಥಳೀಯ ಮೊಗವೀರ ಯುವಕರು

ಮಂಗಳೂರು: ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಯುವಕನೋರ್ವನನ್ನು ಮೊಗವೀರರು ರಕ್ಷಿಸಿದ ಘಟನೆ ಸುರತ್ಕಲ್ ನಲ್ಲಿ ಭಾನುವಾರ ಸಂಭವಿಸಿದೆ.

ಮೂಲಗಳ ಪ್ರಕಾರ ಭಾನುವಾರ ಪುತ್ತೂರಿನ ಯುವಕರ ಗುಂಪೊಂದು ಸುರತ್ಕಲ್ ಸಮೀಪದ ಗುಡ್ಡೇಕೊಪ್ಲಾದ ಬಳಿ ಬೀಚ್ ಬಂದಿದ್ದು ಸಮುದ್ರ ಒರಟಾಗಿದ್ದು ಸಮುದ್ರಕ್ಕೆ ಇಳಿಯದಂತೆ ಸ್ಥಳಿಯರು ಯುವಕರಿಗೆ ಎಚ್ಚರಿಕೆ ನೀಡಿದ್ದರು ಆದರೆ ಅದನ್ನು ಕೇಳದೆ ಯುವಕರು ಸಮುದ್ರದ ನೀರಿಗೆ ಇಳಿದಿದ್ದರು ಎನ್ನಲಾಗಿದೆ.

ಯುವಕರು ಸ್ಥಳೀಯರ ಸೂಚನೆಯನ್ನು ಪಾಲಿಸದೆ ಈಜುತ್ತಿದ್ದ ವೇಳೆ ಯುವಕನೋರ್ವ ಅಲೆಗೆ ಕೊಚ್ಚಿಕೊಂಡು ಹೋಗಿದ್ದು ಡ್ರೆಜ್ಜರ್ ಬಳಿ ಎಳೆದೊಯ್ದಿದ್ದು, ಯುವಕರು ಡ್ರೆಜ್ಜರನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾದರು. ಈ ವೇಳೆ ಸಹಾಯಕ್ಕಾಗಿ ಸ್ಥಳೀಯರಿಗೆ ಮೊರೆಇಟ್ಟಿದ್ದು, ಅಗ್ನಿಶಾಮಕ ದಳ ಮತ್ತು ಕರಾವಳಿ ಈಜು ತಂಡಕ್ಕೆ ಸಾಧ್ಯವಾಗದೆ ಹೋದಾಗ ಸ್ಥಳೀಯ ಯುವಕರಾದ ಯಾದವ್ ಶ್ರೀಯಾನ್ ಮತ್ತು ಸುಮನ್ ಎಂಬವರು ಯುವಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.


Spread the love

1 Comment

Comments are closed.