ಕಣ್ಣೂರು ವೀರನಗರದ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಕಾಮತ್

ಕಣ್ಣೂರು ವೀರನಗರದ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಕಾಮತ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 52ನೇ ಕಣ್ಣೂರು ವಾರ್ಡಿನಲ್ಲಿ 22 ಲಕ್ಷ ರೂಪಾಯಿ ವೆಚ್ಚದ ವೀರನಗರ ಟ್ಯಾಂಕ್ ರಸ್ತೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಆ ಬಳಿಕ ಮಾತನಾಡಿದ ಶಾಸಕ ಕಾಮತ್ ಅವರು ಕಣ್ಣೂರು ವಾರ್ಡಿನ ಅಭಿವೃದ್ಧಿಯ ಹರಿಕಾರ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ತಮ್ಮ ವಾರ್ಡಿನಲ್ಲಿ ಸುಮಾರು ಒಂದು ಕೋಟಿ ಎಪ್ಪತ್ತೈದು ಲಕ್ಷದ ಅಭಿವೃದ್ಧಿ ಕಾಮಗಾರಿ ಮಾಡಿಸಿದ್ದಾರೆ. ಅವರ ಇಲ್ಲಿಯ ತನಕದ ಹತ್ತು ವರ್ಷದ ಪಾಲಿಕೆ ಸದಸ್ಯತ್ವದ ಅವಧಿಯಲ್ಲಿ ಇಡೀ ಕಣ್ಣೂರು ವಾರ್ಡ್ ಅಭಿವೃದ್ಧಿಯ ಪಥದಲ್ಲಿ ಸಾಗಿದೆ. ಅವರ ಕಾರ್ಯಶೈಲಿ ಎಲ್ಲರಿಗೂ ಇಷ್ಟವಾಗಿದೆ. ವೀರನಗರ ಟ್ಯಾಂಕ್ ರಸ್ತೆಯ ಕಾಂಕ್ರೀಟಿಕರಣ 22 ಲಕ್ಷ ವೆಚ್ಚದಲ್ಲಿ ನಡೆದಿದ್ದು 5 ಲಕ್ಷ ಎಸ್ ಎಫ್ ಸಿ ಫಂಡ್, 5 ಲಕ್ಷ ಸಾಮಾನ್ಯ ನಿಧಿಯಿಂದ ಮತ್ತು 12 ಲಕ್ಷ ಶಾಸಕರ ನಿಧಿಯಿಂದ ಕಾಮಗಾರಿ ಯಶಸ್ವಿಯಾಗಿ ಜನರ ಓಡಾಟಕ್ಕೆ ಸಮರ್ಪಣೆಯಾಗಿದೆ ಎಂದು ತಿಳಿಸಿದರು.

ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ ಜೆ ಪೂಜಾರಿ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಂದೀಪ್ ಗರೋಡಿ, ಮಾಜಿ ಜಿ.ಪ. ಸದಸ್ಯ ಶ್ರೀಧರ್ ಭಂಡಾರಿ, ವಾರ್ಡ್ ಅಧ್ಯಕ್ಷ ವಿಶ್ವನಾಥ ಪೂಜಾರಿ, ಬಿಜೆಪಿ ಮುಖಂಡರಾದ ಗೀತಾನಂದ ಶೆಟ್ಟಿ, ಸುಂದರ ಪೂಜಾರಿ, ಯುವರಾಜ ಕಣ್ಣೂರು ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.