ಕದ್ರಿ ಕೈ ಬಟ್ಟಲ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಮತಯಾಚನೆ.

Spread the love

ಕದ್ರಿ ಕೈ ಬಟ್ಟಲ್ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಮತಯಾಚನೆ.

ಬೆಳಿಗ್ಗೆ ಕದ್ರಿ ಕೈ ಬಟ್ಟಲ್ ಪರಿಸರದಲ್ಲಿರುವ ಡಾಕ್ಟರ್ ಕಾಲನಿ ಮತ್ತು ಇನ್ನಿತರ ಸ್ಥಳಗಳಲ್ಲಿರುವ ಅನೇಕ ಮನೆಗಳಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಜೆ.ಆರ್ ಲೋಬೊರವರು ಬಿರುಸಿನ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಜೆ.ಆರ್ ಲೋಬೊರವರು ಬಹಳಷ್ಟು ಕೆಲಸ ಕಾರ್ಯಗಳು ಈ ಪ್ರದೇಶದಲ್ಲಿ ಕರ್ನಾಟಕ ಸರಕಾರ ಮತ್ತು ಮಹಾನಗರಪಾಲಿಕೆಯ ವತಿಯಿಂದ ನಡೆದಿದೆ.

ಜನರು ಬಹಳ ಸಂತುಷ್ಟರಲ್ಲಿದ್ದಾರೆ. ಅವರಿಗೆ ನಗರದ ಅಭಿವೃದ್ಧಿ ಮುಖ್ಯ. ಅವರು ಬಹಳ ನಂಬಿಕೆಯಿಂದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕುತ್ತಾರೆ ಎಂದರು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಡಿ.ಕೆ.ಅಶೋಕ್ ಕುಮಾರ್, ಗೋಪಾಲ ಶೆಟ್ಟಿ, ಮರಿಯಮ್ಮ ತೋಮಸ್, ಟಿ.ಕೆ ಸುಧೀರ್, ಮೋಹನ್ ಕೊಪ್ಪಳ, ಫ್ರಾನ್ಸಿಸ್, ರಮಾನಂದ ಪೂಜಾರಿ, ಲಿಯಾಕತ್ ಆಲಿ, ತನ್ವೀರ್, ಕೃತಿನ್ ಕುಮಾರ್, ಶಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.


Spread the love