ಕದ್ರಿ ಪಾರ್ಕ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

Spread the love

ಕದ್ರಿ ಪಾರ್ಕ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು

ಮಂಗಳೂರು : ನಗರದ ಕದ್ರಿ ಪಾರ್ಕ್‌ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಕಾಸರಗೋಡಿನ ಹರ್ಷಿತ್ ಕುಮಾರ್ ಮತ್ತು ಯುವತಿ ಆತ್ಮಹತ್ಯೆಗೆತ್ನಿಸಿದವರು.

ಸೋಮವಾರ ಸಂಜೆ ವೇಳೆ ಕದ್ರಿ ಪಾರ್ಕಿಗೆ ಬಂದ ಕಾಸರಗೋಡಿನ ಹರ್ಷಿತ್‌ಕುಮಾರ್ ಮತ್ತು ಯುವತಿ ಕೆಲಕಾಲ ಪಾರ್ಕ್‌ನಲ್ಲಿ ಸುತ್ತಾಡಿದ್ದಾರೆ. ಬಳಿಕ ಇಬ್ಬರು ಸೇರಿ ವಿಷ ಸೇವಿಸಿದ್ದಾರೆ. ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಪ್ರೇಮಿಗಳಿಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಕದ್ರಿ ಪೊಲೀಸರು ಆಸ್ಪತ್ರೆಗೆ ತೆರಳಿ, ಪರಿಶೀಲನೆ ನಡೆಸಿದ್ದಾರೆ.


Spread the love