ಕದ್ರಿ ಪಾರ್ಕ್ ಬಳಿ ಮಹಿಳೆಯ ಬರ್ಬರ ಹತ್ಯೆ

Spread the love

ಕದ್ರಿ ಪಾರ್ಕ್ ಬಳಿ ಮಹಿಳೆಯ ಬರ್ಬರ ಹತ್ಯೆ

ಮಂಗಳೂರು: ಕದ್ರಿ ಪಾರ್ಕ್ ಬಳಿ ಮಹಿಳೆಯೋರ್ವರ ಬರ್ಬರ ಹತ್ಯೆಯಾಗಿದ್ದು, ರುಂಡ, ದೇಹದ ಭಾಗಗಳು ಪತ್ತೆಯಾದ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಕೆಪಿಟಿ ಸಮೀಪ ರವಿವಾರ ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಗುರುತು ಪತ್ತೆಯಾಗಿದೆ.
ಹತ್ಯೆಗೀಡಾದ ಮಹಿಳೆಯು ಸುಮಾರು 40 ವರ್ಷ ಪ್ರಾಯದ ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವ ಕದ್ರಿ ಪಾರ್ಕ್ ಬಳಿಯ ಅಂಗಡಿಯಲ್ಲಿ ಹೆಲ್ಮೆಟ್ ಇರಿಸಿ ಹೋಗಿದ್ದು, ಅಂಗಡಿ ಮಾಲಕ ಪರಿಶೀಲಿಸಿದಾಗ ಸಮೀಪದದಲ್ಲಿ ಮಹಿಳೆಯ ಬೇರ್ಪಟ್ಟ ರುಂಡ ಪತ್ತೆಯಾಗಿದೆ ಮತ್ತು ಕೋಟಿ ಚೆನ್ನಯ ವೃತ್ತದ ಬಳಿ ಗೋಣಿ ಚೀಲದಲ್ಲಿ ತುಂಬಿಸಿದ ದೇಹದ ಇತರ ಭಾಗಗಳು ಪತ್ತೆಯಾಗಿವೆ

ಪ್ರಾಥಮಿಕ ತನಿಖೆ ಕೊಲೆಯ ಹಿಂದಿನ ಕೆಲವು ವೈಯಕ್ತಿಕ ಕಾರಣಗಳನ್ನು ಸೂಚಿಸುತ್ತದೆ. ಮಹಿಳೆ ವಿಚ್ಚೇದಿತೆಯಾಗಿದ್ದು, ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love