ಕನಕರಬೆಟ್ಟು ರೈಲ್ವೆ ಕ್ರಾಸಿಂಗ್: ಪರ್ಯಾಯ ರಸ್ತೆ ನಿರ್ಮಿಸಲು ಶಾಸಕ ಕಾಮತ್ ಸೂಚನೆ

Spread the love

ಕನಕರಬೆಟ್ಟು ರೈಲ್ವೆ ಕ್ರಾಸಿಂಗ್: ಪರ್ಯಾಯ ರಸ್ತೆ ನಿರ್ಮಿಸಲು ಶಾಸಕ ಕಾಮತ್ ಸೂಚನೆ

ಮಂಗಳೂರು ಮಹಾನಗರ ಪಾಲಿಕೆಯ 59 ನೇ ಜಪ್ಪು ವಾರ್ಡ್ ವ್ಯಾಪ್ತಿಯಲ್ಲಿರುವ ಕನಕರಬೆಟ್ಟು ಬಳಿಯಿರುವ ಸೂಟರ್ ಪೇಟೆ ರೈಲ್ವೆ ಕ್ರಾಸಿಂಗ್ ಅನ್ನು ರೈಲ್ವೆ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಬಂದ್ ಮಾಡಿರುವುದರಿಂದ ಕನಕರಬೆಟ್ಟು ಭಾಗದ ನಾಗರಿಕರಿಗೆ ಆಗಿರುವ ಅನಾನುಕೂಲತೆಯ ಬಗ್ಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲಿಸಿದರು.

ಈ ಹಿಂದೆ ಈ ಭಾಗದ ಜನತೆಯು ನಗರದ ಪ್ರಮುಖ ಕೇಂದ್ರವಾದ ಕಂಕನಾಡಿ ಹಾಗೂ ಮಂಗಳೂರು ನಗರವನ್ನು ಸಂಪರ್ಕಿಸಲು ಸೂಟರ್ ಪೇಟೆ ಮುಖ್ಯರಸ್ತೆಯನ್ನು ಅವಲಂಬಿಸಿದ್ದರು. ಇದೀಗ ರೈಲ್ವೆ ಇಲಾಖೆಯು ಈ ರೈಲ್ವೆ ಕ್ರಾಸಿಂಗ್ ಅನ್ನು ಬಂದ್ ಮಾಡಿದೆ. ಇದರಿಂದ ಈ ಪ್ರದೇಶದ ಜನರು ಕುಡ್ಪಾಡಿ ಮಾರ್ನಮಿಕಟ್ಟೆ ಮುಖೇನ ಸುತ್ತು ಬಳಸಿ ಕಂಕನಾಡಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಅನಾನುಕೂಲತೆ ಎದುರಾಗಿರುವುದರಿಂದ ಜನರಿಗೆ ಉಪಯೋಗವಾಗಬಲ್ಲ ಪರ್ಯಾಯ ರಸ್ತೆಯ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ಶಾಸಕ ಕಾಮತ್ ಅವರು ಚರ್ಚಿಸಿದರು ಮತ್ತು ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಕನಕರಬೆಟ್ಟು ಪ್ರದೇಶದ ನಾಗರಿಕರು ಇತರೆ ಅವ್ಯವಸ್ಥೆಯ ಬಗ್ಗೆಯೂ ಶಾಸಕರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಕನಕರಬೆಟ್ಟು ಗರೋಡಿಯ ಮುಖ್ಯಸ್ಥ ಪ್ರವೀಣ್ ಅಂತ ಪೂಜಾರಿ, ಜಪ್ಪು ವಾರ್ಡ್ ಬಿಜೆಪಿ ಅಧ್ಯಕ್ಷ ಭರತ್ ಕುಮಾರ್ ಎಸ್, ಸ್ಥಳೀಯ ಕಾರ್ಪೋರೇಟರ್ ಅಪ್ಪಿ, ಮುಖಂಡರಾದ ಪುಷ್ಪರಾಜ್ ಶೆಟ್ಟಿ, ಪುಂಡಲೀಕ ಸುವರ್ಣ, ನವೀನ್ ಶೆಟ್ಟಿ, ಮೋಹನ್, ವಿಜೇಶ್, ತಿಲಕರಾಜ್, ಸಂಧ್ಯಾ ಶೈಲೇಶ್, ಸಂತೋಷ್, ಮನೋಜ್, ಗೌತಮ್, ಪವನ್, ಭ್ಲೇಝ್, ಶಮಿತ್, ಪ್ರಶಾಂತ್, ನಿರೇಶ್, ಅವಿನಾಶ್, ಜಯಪ್ರಕಾಶ್, ತೇಜಪಾಲ್, ದಿವ್ಯ, ಶಾಲಿನಿ, ಇಂದಿರಾ, ಚಂಚಲಾ, ಹರಿಣಾಕ್ಷಿ, ರಮೇಶ್ ಭಂಡಾರಿ, ಬಾಬು, ಸುನೀಲ್, ಲೂವಿಸ್, ಮೋಹನ್ ಪೂಜಾರಿ, ಆಶಾ, ಪುರುಷೋತ್ತಮ್, ಶರತ್ ಕುಮಾರ್, ಪ್ರೇಮಾ, ಹೇಮಾ, ವಿಘ್ನೇಶ್, ಅಮಿತ್, ಲೀಲಾ, ಲೀನಾ, ಸಾರಿಕಾ, ದಯಾನಂದ, ರೋಹೋತ್, ನಾರಾಯಣ್, ಜಯಕರ್, ಸುಜಾತ, ಕಿರಣ್, ತಿಲಕ್, ಸಿರಿಲ್, ಬಬಿತ ಉಪಸ್ಥಿತರಿದ್ದರು.

ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಮಹಾನಗರ ಪಾಲಿಕೆಯ ಶಾಸಕರ ಕಚೇರಿಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ತನಕ ನಿರಂತರವಾಗಿ ಸಾರ್ವಜನಿಕರ ಭೇಟಿ ನಡೆಸಿದರು. ಈ ಸಂದರ್ಭದಲ್ಲಿ ನೂರಾರು ಜನ ನಾಗರಿಕರು ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಡಿಸೆಂಬರ್ 23 ರಿಂದ 30 ರವರೆಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಕುಲಶೇಖರ ಮೇಗಿನಮನೆಯ ಪರಿಸರದಲ್ಲಿ ನಡೆಯಲಿರುವ ಸಗ್ರಹಮಕ ಶನೈಶ್ವರ ಯಾಗದ ಪೂರ್ವ ಭಾವಿ ತಯಾರಿಯನ್ನು ಶಾಸಕ ಕಾಮತ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಯಾಗ ಸಮಿತಿಯ ಸಂಚಾಲಕ ರಾಮಚಂದ್ರ ಚೌಟ, ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ, ಮೇಗಿನ ಮನೆ ಗುರಿಕಾರ ಮನೋಹರ ಶೆಟ್ಟಿ, ಉಪಾಧ್ಯಕ್ಷ ಯಶೋಧರ, ಸಂಚಾಲಕ ಅಶ್ವಿತ್ ಕೊಠಾರಿ, ಸುರೇಶ್ ಶೆಟ್ಟಿ, ಕೀರ್ತನ್ ಅಡ್ಯಾರ್, ವಿನಯ್, ಕೌಶಿಕ್ ಉಪಸ್ಥಿತರಿದ್ದರು.


Spread the love