ಕನ್ನಡದ ಡಿಂಡಿಮ ಬಾರಿಸಿದ ಕನ್ನಡ ಸಂಘ ಅಲ್‍ಐನ್ 15ನೇ ವಾರ್ಷಿಕೋತ್ಸವ ಸಮಾರಂಭ

Spread the love

ಕನ್ನಡದ ಡಿಂಡಿಮ ಬಾರಿಸಿದ ಕನ್ನಡ ಸಂಘ ಅಲ್‍ಐನ್ 15ನೇ ವಾರ್ಷಿಕೋತ್ಸವ ಸಮಾರಂಭ

ಅರಬ್ ಸಂಯುಕ್ತ ಸಂಸ್ಥಾನದ ಉಧ್ಯಾನವನ  ಪ್ರಸಿದ್ದಿ ಪಡೆದಿರುವ ಅಲ್‍ಐನ್ ವಿಭಾಗದಲ್ಲಿ ಹದಿನೈದು ವರ್ಷಗಳ ಹಿಂದೆ ಅಭಿಮಾನಿ ಕನ್ನಡಿಗರು ಸ್ಥಾಪಿಸಿ ಯಶಸ್ವಿ ಹೆಜ್ಜೆಯೊಂದಿಗೆ ಮುನ್ನಡೆದು ಇದೀಗ ತನ್ನ 15ನೇ ವಾರ್ಷಿಕೋತ್ಸವ, ಮುಖ್ಯ ಸಂಘಟಕರಾದ ಕೆ. ಬಿ. ರಮೇಶ ಮತ್ತು ಕಾರ್ಯಕಾರಿ ಸಮಿತಿಯ ಆಶ್ರಯದಲ್ಲಿ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಜೆ.ಎಸ್.ಎಸ್. ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಅಶೋಕ್ ಪಾಲ್ಯ ಹಾಗೂ ಅತಿಥಿಗಳಾಗಿ ಮೋಹಿತ್ ಚತ್ರುವೇದಿ, ಶಾರ್ಜಾ ಕರ್ನಾಟಕ ಸಂಘ ಪೂರ್ವಅಧ್ಯಕ್ಷರಾದ ಬಿ. ಕೆ. ಗಣೇಶ್‍ರೈ ಮತ್ತು ಹಿರಿಯ ಬೆಂಬಲಿಗರು ಅರ್ಶದ್ ಶರೀಫ್ ಭಾಗವಹಿಸಿದ್ದರು.

ಫಾರೂಕ್‍ರವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಶ್ರೀಮತಿ ಕಾಮಿನಿ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮುಖ್ಯ ಅತಿಥಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿ ಜ್ಯೋತಿಬೆಳಗಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಕಾಮಿನಿ ತಂಡದವರ ಸಮೂಹ ಗೀತೆ, ಮಕ್ಕಳ ನೃತ್ಯ ಮೂರು ತಂಡದವರ ನೃತ್ಯ, ಲೋಬೊ ತಂಡದವರಿಂದ ಕೊಂಕಣಿ ಬೈಲಾ ಗೀತೆ ಮತ್ತು ತಂಡದವರ ಕೋಂಕಣಿ ನೃತ್ಯ, ಪುಟಾಣಿ ಮಕ್ಕಳಿಂದ ಫ್ಯಾಶನ್‍ಶೋ ಹಾಗೂ ಎಲ್ಲಾ ಪ್ರದರ್ಶಗಳು ಸರ್ವರ ಮನ ಸೆಳೆಯಿತು.

ಮುಖ್ಯ ಅತಿಥಿ ಅಶೋಕ್ ಪಾಲ್ಯ, ಮೋಹಿತ್ ಚತ್ರುವೇದಿ, ಅರ್ಶದ್ ಶರೀಫ್‍ರವರನ್ನುಸನ್ಮಾನಿಸಿ ಗೌರವಿಸಲಾಯಿತು.

ಬಿ. ಕೆ. ಗಣೇಶ್‍ರೈಯವರಿಗೆ “ವಿಶ್ವ ಮಾನ್ಯ ಕನ್ನಡ ರತ್ನ” ಪ್ರಶಸ್ತಿ ಪ್ರಧಾನ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಎರಡು ದಶಕ ಗಳಿಂದ ಕನ್ನಡ ಭಾಷೆ ಕಲೆ ಸಂಸ್ಕೃತಿ, ಸಾಹಿತ್ಯ ಮತ್ತು ಸಮಾಜ ಸೇವೆ, ರಕ್ತದಾನ ಅಭಿಯಾನದ ಮೂಲಕ ಅಪಾರ ಸೇವೆ ಸಲ್ಲಿಸಿರುವ ಮೂಲತ ಕೊಡಗು ಜಿಲ್ಲೆಯವರಾದ ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ. ಕೆ. ಗಣೆಶ್ ರೈಯವರಿಗೆ ಕನ್ನಡ ಸಂಘ ಅಲ್‍ಐನ್ ಮುಖ್ಯ ಸಂಘಟಕರಾದ ಕೆ. ಬಿ.ರಮೇಶ್‍ರವರು “ವಿಶ್ವ ಮಾನ್ಯ ಕನ್ನಡ ರತ್ನ” ಪ್ರಶಸ್ತಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಪ್ರಧಾನಿಸಿ ಸನ್ಮಾನಿಸಿ ಗೌರವಿಸಲಾಯಿತು. ಯು. ಪಿ. ಹರೀಶ್ ಸನ್ಮಾನ ಪತ್ರ ವಾಚಿಸಿದರು.

ಕನ್ನಡ ಸಂಘ ಅಲ್‍ಐನ್ ಸ್ಥಾಪನೆಯಾದ ವರ್ಷದಿಂದ ನಿರಂತರವಾಗಿ ಸೇವೆ ಸಲ್ಲಿಸಿದ ನಿತ್ಯಾನಂದಶೆಟ್ಟಿ ಹಾಗೂ ಡಾ ಬೋರಪ್ಪ ಮತ್ತು ಶ್ರೀ ರೋನಾಲ್ಡ್ ಎಡ್ವಿನ್ ಲೋಬೊರವರ ಸೇವೆಯನ್ನು ಅಭಿನಂಧಿಸಿ ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಣ ಕ್ಶೇತ್ರದಲ್ಲಿ ಸಾಧನೆ ಮಾಡಿರುವ ಕು| ಅಮೋಘ ಶೆಟ್ಟಿಗೆ ತಂದೆ ತಾಯಿಯವರ ಸಮ್ಮುಖದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ನೃತ್ಯ ನಿರ್ದೇಶಕಿ ಶ್ರೀಮತಿ ಶಾಲಿನಿ ಡಿ’ಸೋಜಾರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅರಬ್ ಸಂಯುಕ್ತ ಸಂಸ್ಥಾದ ಸುಂದರ ಒಂಟೆ ಮರುಭೂಮಿಯ ನಿಧಿ “ಹಮಾರ್ ಅನ್ ನಾಮ್” ಒಂಟೆಯ ಕುರಿತು ಸಂಶೋಧನೆ ನಡೆಸಿ ಗ್ರಂಥವನ್ನು ಲೋಕಾರ್ಪಣೆ ಮಾಡಿರುವ ಕು. ಅಧಿತಿ ಬೆಳಮೆ ಕುಮಾರ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಹಲವಾರು ವರ್ಷಗಳಿಂದ ಕಾರ್ಯಕಾರಿ ಸಮಿತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಕನ್ನಡ ಸಂಘ ಅಲ್‍ಐನ್ ಯಶಸ್ವಿಯಾಗಿ ಮುನ್ನಡೆಯಲು ಕಾರಣಕರ್ತರಾದ ಇಪ್ಪತೈದು ಮಂದಿ ಸದಸ್ಯರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.


Spread the love