ಕರಾವಳಿ ಉತ್ಸವ: ವೈಭವಯುತ ಮೆರವಣಿಗೆಗೆ ಸಚಿವ ಖಾದರ್ ಚಾಲನೆ

Spread the love

ಕರಾವಳಿ ಉತ್ಸವ: ವೈಭವಯುತ ಮೆರವಣಿಗೆಗೆ ಸಚಿವ ಖಾದರ್ ಚಾಲನೆ

ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಿದ ವೈಭವಪೂರ್ಣ ಮೆರವಣಿಗೆ ಶುಕ್ರವಾರ  ಸಂಭ್ರಮದ ಚಾಲನೆ ದೊರಕಿತು.

ವೈಭವಪೂರ್ಣ ಮೆರವಣಿಗೆಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು ಟಿ ಖಾದರ್ ಅವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸುಮಾರು 76 ಕ್ಕೂ ಅಧಿಕ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಮೆರವಣಿಗೆ ನೆಹರು ಮೈದಾನದಿಂದ ಕರಾವಳಿ ಉತ್ಸವ ಮೈದಾನಕ್ಕೆ ತಲುಪಲಿದೆ.

ಶಾಸಕ ಮೊಯ್ದಿನ್ ಬಾವಾ, ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಪಾಲಿಕೆ ಆಯುಕ್ತ, ಸಿಇಒ ರವಿ, ವಾರ್ತಾಧಿಕಾರಿ ಖಾದರ್ ಶಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love