ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಸಮ್ಮಿಲನ ಕಾರ್ಯಕ್ರಮ

Spread the love

ಮಂಗಳೂರು : ಇಂಡಿಯನ್ ಜರ್ನಲಿಸ್ಟ್ ಯೂನಿಯನ್ (ರಿ) ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ)  ಕರ್ನಾಟಕ ಪತ್ರಕರ್ತರ ಸಂಘ(ರಿ)ನ ನ್ಯಾಷನಲ್ ಹಾಗೂ ಸ್ಟೇಟ್ ಕಾನ್ಫ್ರೆನ್ಸ್ ಮಂಗಳೂರು ನಗರದಲ್ಲಿರುವ ವೈಭವ್ ಹಾಲ್ನಲ್ಲಿ ಜುಲೈ 4 ಮತ್ತು 5 ರಂದು ನಡೆಯಲಿದೆ. ಹಾಗೂ ಮರುದಿನ ಜುಲೈ 6ರಂದು ರಾಷ್ಟ್ರಾದ್ಯಂತದಿಂದ ಆಗಮಿಸಿರುವ ಪತ್ರಕರ್ತರಿಗೆ ಮಂಗಳೂರು ಮತ್ತು ಮೂಡುಬಿದ್ರಿಗಳಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸಲಿದ್ದೇವೆ. ಭಾರತದ ಬಹುತೇಕ ರಾಜ್ಯಗಳಿಂದ ಸುಮಾರು ನಲವತ್ತಕ್ಕೂ ಹೆಚ್ಚು ಹಿರಿಯ ಪತ್ರಕರ್ತರು ಆಗಮಿಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನಲವತ್ತು ಪತ್ರಕರ್ತರು ಉಪಸ್ಥಿತರಿರುತ್ತಾರೆ ಎಂದು  ಕರ್ನಾಟಕ ಪತ್ರಕರ್ತರ ಸಂಘದ ದ.ಕ.ಜಿಲಾಧ್ಯಕ್ಷ  ಸುದೇಶ್ ಕುಮಾರ್ ತಿಳಿಸಿದ್ದಾರೆ.

2-Press_Meet-001

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಜುಲೈ 4 ಶನಿವಾರ ಸಂಜೆ 5 ಘಂಟೆಗೆ ನಗರದ ಬೆಸೆಂಟ್ ಕಾಲೇಜು ಸಭಾ ಭವನದಲ್ಲಿ ಪತ್ರಕರ್ತರ ಸಮ್ಮಿಲನ-2015 ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯವಾಗಿ “ದೃಷ್ಯ ಮಾಧ್ಯಮ ಅಂದು- ಇಂದು” ಎಂಬ ವಿಷಯದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಎಸ್ ಜಯರಾಮ್ರವರು ಮಾತನಾಡಲಿದ್ದಾರೆ. ಹಾಗೂ ಪತ್ರಿಕೋದ್ಯಮದ ಬಗ್ಗೆ ಇನ್ನಿತರ ವಿಚಾರಗಳ ಸಂವಾದ ಕೂಡ ನಡೆಯಲಿದೆ. ಈ ಕಾರ್ಯಕ್ರಮವನ್ನು ಜಿಲ್ಲಾ  ಉಸ್ತುವಾರಿ ಸಚಿವರಾದ ಶ್ರೀ ರಮಾನಾಥ್ ರೈ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷರಾದ ಮುರುಗೇಶ್ ಬಿ. ಶಿವಪೂಜಿ ವಹಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವ ಯು.ಟಿ ಖಾದರ್, ಮೀನುಗಾರಿಕಾ ಸಚಿವರಾದ ಅಭಯ್ ಚಂದ್ರ ಜೈನ್, ಸಂಸದರಾದ ನಳೀನ್ ಕುಮಾರ್ ಕಟೀಲ್, ಶಾಸಕರುಗಳಾದ ಜೆ.ಆರ್ ಲೋಬೋ ಮತ್ತು ಮೊಯಿದ್ದೀನ್ ಬಾವಾ, ಜಿಲ್ಲಾಧಿಕಾರಿಗಳಾದ ಎ.ಬಿ. ಇಬ್ರಾಹಿಂ ಹಾಗೂ ಪೊಲೀಸ್ ಆಯುಕ್ತರಾದ ಎಸ್.ಮುರುಗನ್, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ನಿನ ರಾಷ್ಟ್ರಧ್ಯಕ್ಷರಾದ  ಕಿಶನ್ ಬಾಲ್ ಪಂಡೀತ್, ಮಂಗಳೂರು ಪ್ರಥಮ ಪ್ರಜೆ ಜೆಸಿಂತಾ ಆಲ್ಫ್ರೆಡ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಗನ್ನಾಥ್ ಶೆಟ್ಟಿ ಬಾಳಾ, ಪನಾಮ ಸಂಸ್ಥೆಯ ಮಾಲಿಕರಾದ ವಿವೇಕ್ ರಾಜ್, ಕರಾವಳಿ ಗ್ರೂಫ್ ಆಫ್ ಕಾಲೇಜ್ನ ಗಣೇಶ್ ರಾವ್, ಸ್ಪಂದನ ಟಿವಿಯ ಮಾಲಿಕರಾದ ವಿಲಾಸ್ ನಾಯಕ್  ಹಾಗೂ ವಾರ್ತಾಧಿಕಾರಿ ಬಿ.ಎ ಖಾದರ್ ಷಾ, ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಸುದೇಶ್ ಕುಮಾರ್ರವರು ಉಪಸ್ಥಿತರಿರಲಿದ್ದಾರೆ.

1-Press_Meet

ಇದೇ ಸಂದರ್ಭದಲ್ಲಿ ಜುಲೈ 4 ಶನಿವಾರದಂದು ಸಂಜೆ 5 ಘಂಟೆಗೆ ಬೆಸೆಂಟ್ ಕಾಲೇಜು ಸಭಾ ಭವನದಲ್ಲಿ ನಡೆಯಲಿರುವ ಪತ್ರಕರ್ತರ ಸಮ್ಮಿಲನ 2015 ಕಾರ್ಯಕ್ರಮದಲ್ಲಿ ನಗರದ ಮೂರು ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಾಜಿ ಸಂಸದೆ ಹಾಗೂ ಪತ್ರಕರ್ತೆ ತೇಜಸ್ವಿನಿ ರಮೇಶ್ ಹಾಗೂ ಹಿರಿಯ ಪತ್ರಕರ್ತ ಶಶಿಧರ್ ಭಟ್ ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾತ್ರವಲ್ಲದೇ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎಸ್ ಜಯರಾಮ್, ಗಂಗಾಧರ ಮಟ್ಟಿ, ಅಹ್ಮದ್ ಅನ್ವರ್ ಹಾಗೂ ಹಿರಿಯ ಪತ್ರಿಕಾ ವಿತರಕರಾದ ಎಸ್ ತಾರಾನಾಥ್ ಕಾಮತ್ ಮತ್ತು ಅನಂತ್ ರಾಯ್ ಭಟ್ರವರನ್ನು ಗೌರವಿಸಿ ಸನ್ಮಾನಿಸಲಾಗುವುದು  ಎಂದು ಸುದೇಶ್ ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಾ|ಶಿವಶರಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸತೀಶ್ ಕಾಪಿಕಾಡ್, ಖಜಾಂಜಿ ಮಹಮ್ಮದ್ ಹಕೀಂ, ಸದಸ್ಯರಾದ  ಭಾವ ಪದರಂಗಿ ಮುಂತಾದವರು ಉಪಸ್ಥಿತರಿದ್ದರು.


Spread the love