ಕರ್ನಾಟಕ ರಾಷ್ಟ್ರೀಯ ಮಕ್ಕಳ ಹಾಗೂ ಮಹಿಳೆಯರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆಯಾಗಿ ಡಾ ಮಂಜುಶ್ರೀ ಆರ್ ಆಯ್ಕೆ

Spread the love

 ಕರ್ನಾಟಕ ರಾಷ್ಟ್ರೀಯ ಮಕ್ಕಳ ಹಾಗೂ ಮಹಿಳೆಯರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆಯಾಗಿ ಡಾ ಮಂಜುಶ್ರೀ ಆರ್ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಡಾ ಮಂಜುಶ್ರೀ ಆರ್ ಕರ್ನಾಟಕದ ರಾಷ್ಟ್ರೀಯ ಮಕ್ಕಳ ಹಾಗೂ ಮಹಿಳೆಯರ ಅಭಿವೃದ್ಧಿ ಮಂಡಳಿಯ ಮಹಿಳಾ ವಿಭಾಗಕ್ಕೆ ಒಂದು ವರ್ಷದ ಕಾಲಾವಧಿಗೆ ಅಧ್ಯೆಕ್ಷೆಯಾಗಿ ಆಯ್ಕೆ ಆಗಿದ್ದಾರೆ.

ಮಹಿಳೆ ಮತ್ತು ಮಕ್ಕಳ ಕುರಿತಾದ ಸಂಶೋಧನಾ ಪ್ರಬಂಧವನ್ನು ಪರಿಗಣಿಸಿ ಈ ಹುದ್ದೆಯನ್ನು ನೀಡಲಾಗಿದೆ. ಇವರು ಮೂಡುಬಿದರೆಯ ನಿವಾಸಿಯಾಗಿದ್ದು, ಆಳ್ವಾಸ್ ಕಾಲೇಜಿನ ಮಕ್ಕಳ ಕ್ಷೇಮಪಾಲನಾ ಅಧಿಕಾರಿ ಉಪೇಂದ್ರ ಹೆಚ್ ಅವರ ಪತ್ನಿ.


Spread the love