ಕಲ್ಲಡ್ಕ ಘಟನೆಯಲ್ಲಿ ಹಿಂದೂಗಳನ್ನು ಗುರಿ ಮಾಡಲಾಗಿದೆ: ಪ್ರಭಾಕರ ಭಟ್

Spread the love

ಕಲ್ಲಡ್ಕ ಘಟನೆಯಲ್ಲಿ ಹಿಂದೂಗಳನ್ನು ಗುರಿ ಮಾಡಲಾಗಿದೆ: ಪ್ರಭಾಕರ ಭಟ್
ಮಂಗಳೂರು: ಕಲ್ಲಡ್ಕದಲ್ಲಿ ನಡೆದ ಪ್ರಕರಣವನ್ನು ತಿರುಚಿ ಹಿಂದೂ ಸಮುದಾಯದ ಯುವಕರನ್ನು ಕೇಸು ದಾಖಲಿಸಿ, ವೈಯುಕ್ತಿಕ ಘಟನೆಗೆ ಕೋಮು ಬಣ್ಣ ಹಚ್ಚುತ್ತಿದ್ದಾರೆ ಎಂದು ಆರ್ ಎಸ್ ಎಸ್ ನಾಯಕ ಡಾ ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸದರು.

ನಗರ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಶುಕ್ರವಾರ ಕಲ್ಲಡ್ಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರು ವಾಸಿಸುತ್ತಿದ್ದು ಶನಿವಾರ ಮುಸ್ಲಿಂರು ಎಲ್ಲಾ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪೋಲಿಸರು ಮುಸ್ಲಿಂ ಸಮುದಾಯದ ಬೆಂಬಲಕ್ಕೆ ನಿಂತಿದ್ದು, ಇದರಿಂದಾಗಿ ಹಿಂದುಗಳು ಕಲ್ಲಡ್ಕದಲ್ಲಿ ಸುರಕ್ಷಿತವಾಗಿ ಬದುಕುವುದು ಕಷ್ಟವಾಗಿದೆ. ಹಿಂದು ಸಮುದಾಯ ಕಲ್ಲಡ್ಕದಲ್ಲಿ ನಿರಂತರವಾಗಿ ಧಾಳಿಗೊಳಗಾಗುತ್ತದೆ. ಪೋಲಿಸರು ಮಿಥುನ್ ಹಾಗೂ ಆತನ ಗೆಳೆಯರ ಮೇಲೆ ಕೇಸು ದಾಖಲಿಸದ್ದಾರೆ ಆದರೆ ಆವರು ಯಾವುದೇ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕಾಗಿದೆ.

ಶನಿವಾರ ಕಲ್ಕಡ್ಕದಲ್ಲಿ ಬಂದ್ ಆಚರಿಸಿದ್ದು ಜನರು ಇದನ್ನೂ ವಿರೋಧಿಸಿದ್ದರೂ ಕೂಡ ಬಲವಂತದಿಂದ ಬಂದ್ ಆಚರಿಸಲಾಗಿದೆ. ಜಿಲ್ಲಾ ಪೋಲಿಸ್ ಅಧಿಕ್ಷಕರು ಘಟನೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಅಶಕ್ತರಾಗಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಸೆಕ್ಷನ್ ಜಾರಿಗೊಳಿಸಿದ್ದಾರೆ. ಇಂತಹ ಪೋಲಿಸ್ ವರಿಷ್ಠಾಧಿಕಾರಿಯನ್ನು ಕೂಡಲೇ ಬದಲಾಯಿಸಬೇಕು ಮತ್ತು ಪ್ರಕರಣದ ಕುರಿತು ಸೂಕ್ತವಾದ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಶರಣ್ ಪಂಪ್ ವೆಲ್, ಶ್ರೀಖರ ಪ್ರಭು, ಭರತ್, ಚೆಂಗಪ್ಪ ಕೋಟ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು,


Spread the love