ಕಲ್ಲುಕೋರೆಗೆ ಬಿದ್ದು ತಾಯಿ ಮಗು ಸಾವು

Spread the love

ಕಲ್ಲುಕೋರೆಗೆ ಬಿದ್ದು ತಾಯಿ ಮಗು ಸಾವು

ಉಡುಪಿ: ಬಟ್ಟೆ ತೊಳೆಯಲು ಕಲ್ಲು ಕೋರೆಗೆ ತೆರಳಿದ್ದ ತಾಯಿ ಮತ್ತು ಮಗು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿಯ ಪಡು ಅಲೆವೂರಿನ ದುರ್ಗಾನಗರ ಎಂಬಲ್ಲಿ ನಡೆದಿದೆ.

ಮೃತರನ್ನು ಮೂಲತಃ ಹುನಗುಂದ ತಾಲೂಕಿನ ಯಮುನಪ್ಪ ಎಂಬವರ ಪತ್ನಿ ದ್ಯಾಮವ್ವ ಮತ್ತು ಆಕೆಯ ಪುತ್ರ ಹನುಮಂತಪ್ಪ ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಿಗ್ಗೆ ಬಟ್ಟೆ ತೊಳೆಯಲು ಪೆರುಪಾದೆ ಎಂಬಲ್ಲಿಗೆ ದ್ಯಾಮವ್ವ ತನ್ನ ಮಗನೊಂದಿಗೆ ತೆರಳಿದ್ದು, ಆಟವಾಡುತ್ತಿದ್ದ ಮಗು ನೀರಿನಲ್ಲಿ ಮುಳುಗಿದ್ದು, ಈ ಸಂದರ್ಭ ಮಗುವನ್ನು ರಕ್ಷಿಸಲು ತಾಯಿ ತೆರಳಿದ್ದು ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಮುಳುಗಿದವರಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ದೆಂದೂರುಕಟ್ಟೆ ನಿತೇಶ್, ಪ್ರಭಾಕರ ಹಾಗೂ ಅಶೋಕ್ ಶೆಟ್ಟಿ ಮೃತದೇಹಗಳನ್ನು ಎತ್ತಲಾಯಿತು.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


Spread the love