ಕಾಂಗ್ರೆಸ್ಸಿನ ಅತಿಯಾದ ಜಿಹಾದಿ ಓಲೈಕೆ ಬೆಂಗಳೂರಿನಲ್ಲಿ ಉಗ್ರರ ಅಟ್ಟಹಾಸಕ್ಕೆ ನಾಂದಿ ಹಾಡಿದೆ: ಕುಯಿಲಾಡಿ

Spread the love

ಕಾಂಗ್ರೆಸ್ಸಿನ ಅತಿಯಾದ ಜಿಹಾದಿ ಓಲೈಕೆ ಬೆಂಗಳೂರಿನಲ್ಲಿ ಉಗ್ರರ ಅಟ್ಟಹಾಸಕ್ಕೆ ನಾಂದಿ ಹಾಡಿದೆ: ಕುಯಿಲಾಡಿ

ಉಡುಪಿ: ಸೆರೆ ಸಿಕ್ಕ ಉಗ್ರರನ್ನೆಲ್ಲ ಅಮಾಯಕರು, ಬ್ರದರ್ಸ್ ಎಂದು ಸದಾ ಜಿಹಾದಿಗಳ ಪರ ವಕಾಲತ್ತು ವಹಿಸುವ ಕಾಂಗ್ರೆಸ್ಸಿನ ಅತಿಯಾದ ಜಿಹಾದಿ ಓಲೈಕೆ ಇಂದು ಬೆಂಗಳೂರಿನ 60 ಶಾಲೆಗಳಿಗೆ ಉಗ್ರರ ಬಾಂಬ್ ಬೆದರಿಕೆಯ ಅಟ್ಟಹಾಸಕ್ಕೆ ನಾಂದಿ ಹಾಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಕುಕ್ಕರ್ ನಲ್ಲಿ ಬಾಂಬ್ ಇಟ್ಟರೂ, ಭಟ್ಕಳದಲ್ಲಿ ಶಾರೀಕ್ ಇದ್ದರೂ, ಮಂಗಳೂರು ಗಲಭೆ, ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಭೆ, ಹುಬ್ಬಳ್ಳಿ ಗಲಭೆ ಎಲ್ಲದಕ್ಕೂ ಮೌನ ಸಮ್ಮತಿ ಕಾಂಗ್ರೆಸ್ ಸರಕಾರದ ನೀತಿಯಾಗಿದೆ. ಇದರಿಂದಾಗಿ ಕರ್ನಾಟಕ ಮುಂದಿನ ದಿನಗಳಲ್ಲಿ ಉಗ್ರರ ಅಡಗುದಾಣವಾಗಿ ಉಪಟಳಕ್ಕೆ ಈಡಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕುಕ್ಕರ್ ಬಾಂಬ್ ಸ್ಪೋಟದ ಉಗ್ರನನ್ನು ಅಮಾಯಕ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಬಂಧನವಾದ ಜಿಹಾದಿಗಳನ್ನು ತನಿಖೆ ನಡೆಸದೆ ಭಯೋತ್ಪಾದಕರು ಎನ್ನಲಾಗದು ಎಂದಿರುವ ಗೃಹ ಸಚಿವ ಜಿ.ಪರಮೇಶ್ವರ್, ಸದಾ ಜಿಹಾದಿ ಮನಸ್ಥಿತಿಯ ಕೃತ್ಯಗಳನ್ನು ಹಗುರವಾಗಿ ಪರಿಗಣಿಸುವ ಸಿಎಂ ಸಿದ್ದರಾಮಯ್ಯ ಇವರ ಒಲೈಕೆ ರಾಜಕಾರಣದ ನಡೆಯಿಂದ ಕರ್ನಾಟಕ ಇನ್ನೊಂದು ಕೇರಳ, ಪ.ಬಂಗಾಳ, ಕಾಶ್ಮೀರ ಆಗಲು ಅವಕಾಶ ನೀಡದೇ ಸಮಾಜ ಘಾತುಕ ಶಕ್ತಿಗಳ ಜಾಲವನ್ನು ಪತ್ತೆ ಹಚ್ಚಿ ಜಿಹಾದಿ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯಲು ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.


Spread the love