ಕಾಂಗ್ರೆಸ್ ನ ಕೆಲವರ ದುರಹಂಕಾರದಿಂದ ಪಕ್ಷಕ್ಕೆ ಸೋಲಾಗಿದೆ -ಜನಾರ್ದನ ಪೂಜಾರಿ

Spread the love

ಕಾಂಗ್ರೆಸ್ ನ ಕೆಲವರ ದುರಹಂಕಾರದಿಂದ ಪಕ್ಷಕ್ಕೆ ಸೋಲಾಗಿದೆ -ಜನಾರ್ದನ ಪೂಜಾರಿ

ಮಂಗಳೂರು: ನೀವು ಹೀಗೆ ದುರಂಹಕಾರ ಮಾಡಿದ್ರೆ ಬಿಜೆಪಿಯನ್ನು ತಡೆಯಲು ಆಗಲ್ಲ ಎಂದು ಹೇಳಿದ್ದೆ. ಕೈ ಮುಗಿದು, ಕಣ್ಣೀರು ಸುರಿಸಿ ಮಾತನಾಡಿದ್ದೆ. ಆದರೂ, ನನ್ನ ಪಕ್ಷದವರಿಗೆ ಅರ್ಥ ಆಗಲಿಲ್ಲ. ಈಗಲಾದರೂ ಅರ್ಥ ಆಗಿದ್ಯಾ ಎಂದು ಕೇಳುತ್ತಿದ್ದೇನೆ ಎಂದು ಹಿರಿಯ ಕಾಂಗ್ರೆಸ್ಸಿಗ ಜನಾರ್ಧನ ಪೂಜಾರಿ ಹೇಳಿದರು.

ಉಪಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ವಿಚಾರವಾಗಿ ಅವರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ನ ಕೆಲವರ ದುರಹಂಕಾರದಿಂದ ರಾಜ್ಯದ ಉಪ ಚುನಾವಣೆಯಲ್ಲಿ ಸೋಲಾಗಿದೆ. ಮತ್ತೆ ಗೆಲುವು ಸಾಧಿಸಬೇಕಾದರೆ ದುರಹಂಕಾರವನ್ನು ಕೆಲವು ನಾಯಕರು ಬಿಡಬೇಕು. ಜನರ ಅಭಿಪ್ರಾಯಗಳಿಗೆ ಬೆಲೆ ನೀಡಬೇಕು. ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತದೆ ಎಂದು ನನ್ನ ಪಕ್ಷದವರಿಗೆ ಮೊದಲೇ ಹೇಳಿದ್ದೆ. ಅರ್ಥ ಮಾಡಿಕೊಳ್ಳಿ, ಇನ್ನು ಮುಂದೆಯೂ ಬಿಜೆಪಿಯೇ ಬರುತ್ತದೆ, ಕಾಂಗ್ರೆಸ್ ಸಾಯುತ್ತದೆ ಎಂದು ಅಭಿಪ್ರಾಯಪಟ್ಟರು.


Spread the love