ಕಾಂಗ್ರೆಸ್ ಪಕ್ಷದ ಆರೋಗ್ಯ ಅಭಯಹಸ್ತ ಯೋಜನೆ ಪೂರ್ವಭಾವಿ ತಯಾರಿ ಸಭೆ

Spread the love

ಕಾಂಗ್ರೆಸ್ ಪಕ್ಷದ ಆರೋಗ್ಯ ಅಭಯಹಸ್ತ ಯೋಜನೆ ಪೂರ್ವಭಾವಿ ತಯಾರಿ ಸಭೆ

ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು  ಕಾಂಗ್ರೆಸ್ ಭವನದಲ್ಲಿ ಜರಗಿತು. ಸಂಪಿಗೆಹಾಡಿ ಸಂಜೀವ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿದರು.

ಪ್ರಾಸ್ತಾವಿಕವಾಗಿ ಭಾಷಣ ಮಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರುರವರು ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ರವರ ಪದಗ್ರಹಣ ಕಾರ್ಯಕ್ರಮ “ಪ್ರತಿಜ್ಞಾ ದಿನ”ದ ವೀಕ್ಷಣೆಯು ಜಿಲ್ಲೆಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಸಹಕರಿಸಿದ ಎಲ್ಲಾ ಬ್ಲಾಕ್ಗಳ ಅಧ್ಯಕ್ಷರಿಗೂ, ಡಿಜಿಟಲ್ ಯೂಥ್, ಯುವ ಕಾಂಗ್ರೆಸ್, ಸೋಶಿಯಲ್ ಮೀಡಿಯಾ, ಕಿಸಾನ್ ಸೆಲ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ, ಮಹಿಳಾ ಕಾಂಗ್ರೆಸ್, ಜಿಲ್ಲಾ ವೀಕ್ಷಕರು, ಕೆಪಿಸಿಸಿ ವಿಕ್ಷಕರು, ಮಾರ್ಗದರ್ಶನ ನೀಡಿದ ಮಂಜುನಾಥ ಭಂಡಾರಿ, ಜಿ.ಎ. ಬಾವಾ, ಎಲ್ಲಾ ಮುಂಚೂಣಿ ಘಟಕಗಳ ಪದಾಧಿಕಾರಿಗಳಿಗೂ, ಕಾಂಗ್ರೆಸ್ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷ ಜಾರಿಗೆ ತಂದಿರುವ ಆರೋಗ್ಯ ಅಭಯ ಹಸ್ತ ಯೋಜನೆಯನ್ನು ಕೂಡಾ ಜಿಲ್ಲಾಧ್ಯಂತ ಯಶಸ್ವಿಯಾಗಿ ನಡೆಸಬೇಕೆಂದು ವಿನಂತಿ ಮಾಡಿದರು. ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ರವರ ಅಕ್ರಮ ಸಿಮೆಂಟ್ ಉಪಯೋಗ ಪ್ರಕರಣವನ್ನು ಕೂಡಾ ತನಿಖೆ ಮಾಡಿ ಕ್ರಮ ಜರಗಿಸುವರೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಮಾಜಿ ಸಚಿವರು ಹಾಗೂ ಮಾಜಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ವಿನಯ ಕುಮಾರ್ ಸೊರಕೆಯವರು ಮಾತನಾಡಿ ಆರೋಗ್ಯ ಅಭಯಹಸ್ತ ಯೋಜನೆಯಡಿಯಲ್ಲಿ ಕಾಂಗ್ರೆಸ್ ಪಕ್ಷ ಪಂಚಾಯತ್ ಮಟ್ಟದಲ್ಲಿ ಸರ್ವೆ ನಡೆಸಿ ಕೊರೊನಾ ಪೀಡಿತರಿಗೆ ನೆರವಾಗಲಿದೆ ಅಲ್ಲದೆ ಈಗಿನ ಸರ್ಕಾರದ ಪ್ರಜಾಪ್ರತಿನಿಧಿಗಳ ಕಾನೂನು ದುರ್ಬಳಕೆ ಮತ್ತು ಅವ್ಯವಹಾರಗಳ ಬಗ್ಗೆ, ಬೆಲೆ ಏರಿಕೆ ಬಗ್ಗೆ ತೀವ್ರತರವಾದ ಪ್ರತಿಭಟನೆ ನಡೆಸಲಾಗುವುದು ಎಂದರು. ಮರಳು ಅಕ್ರಮದ ಬಗ್ಗೆಯೂ ತನಿಖೆ ನಡೆಸಲು ಒತ್ತಾಯಿಸಲಾಗುವುದು ಎಂದು ಹೇಳಿದರು.

ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಾಜಿ ಶಾಸಕರಾದ ಯು.ಆರ್. ಸಭಾಪತಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ರವರು ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಭವಿಷ್ಯವಿದೆ, ಕಾರ್ಯಕರ್ತರು ಹತಾಶರಾಗಬೇಕಿಲ್ಲ ಎಂದು ತಿಳಿಸಿದರು.

ಬ್ಲಾಕ್ ಅಧ್ಯಕ್ಷರುಗಳಾದ ಪ್ರದೀಪ್ ಕುಮಾರ್ ಶೆಟ್ಟಿ (ವಂಡ್ಸೆ), ಮದನ್ ಕುಮಾರ್ (ಬೈಂದೂರು), ಹರಿಪ್ರಸಾದ್ ಶೆಟ್ಟಿ (ಕುಂದಾಪುರ), ಶಂಕರ್ ಕುಂದರ್ (ಕೋಟ), ನವೀನ್ಚಂದ್ರ ಸುವರ್ಣ (ಕಾಪು), ಶೇಖರ್ ಮಡಿವಾಳ (ಕಾರ್ಕಳ), ಮಂಜುನಾಥ ಪೂಜಾರಿ (ಹೆಬ್ರಿ), ಪ್ರವೀಣ್ ಶೆಟ್ಟಿ (ಕಾಪು ಉತ್ತರ) ಇವರುಗಳು ತಮ್ಮ ಅನಿಸಿಕೆಗಳನ್ನು ಮಂಡಿಸಲಾಗಿ ಅದಕ್ಕೆ ಅಧ್ಯಕ್ಷರು ಸೂಕ್ತ ಸಮಜಾಯಿಕೆ ನೀಡಿದರು.

ವೆರೋನಿಕಾ ಕರ್ನೆಲಿಯೋ, ಡಾ. ಸುನೀತಾ ಶೆಟ್ಟಿ ಬಾಲಕೃಷ್ಣ ನಾಯ್ಕ್, ಲೂಯಿಸ್ ಲೋಬೊ, ವಿಜಯ ಹೆಗ್ಡೆ ಸಿ, ಮಹಾಬಲ ಕುಂದರ್, ನಿತ್ಯಾನಂದ ಶೆಟ್ಟಿ, ನವೀನ್ಚಂದ್ರ ಶೆಟ್ಟಿ, ಕುಶಲ್ ಶೆಟ್ಟಿ ಇಂದ್ರಾಳಿ, ನೀರೆಕೃಷ್ಣ ಶೆಟ್ಟಿ, ವಿಘ್ನೇಶ್ ಕಿಣಿ, ಮುರಳಿ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ ಮೊದಲಾದವರು ಪಕ್ಷ ಸಂಘಟನೆ ಮತ್ತು ಆರೋಗ್ಯ ಅಭಯ ಹಸ್ತ ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು. ಅಧ್ಯಕ್ಷರು ತಮ್ಮ ಭಾಷಣದಲ್ಲಿ ಮುಂದೆ ಪಂಚಾಯತ್ ಚುನಾವಣೆಗಳು ಬರಲಿರುವುದರಿಂದ ನಾವು ಗ್ರಾಮೀಣ ಹಾಗೂ ಬೂತ್ ಮಟ್ಟದಲ್ಲಿ ಸಂಘಟಕರಾಗಬೇಕು. ಅಕ್ರಮ ಅನ್ಯಾಯಗಳ ಬಗ್ಗೆ ಹೋರಾಟ ನಡೆಸಿ ಜನರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಬಿ. ಹಿರಿಯಣ್ಣ, ಸುಧಾಕರ ಕೋಟ್ಯಾನ್, ಶಬ್ಬೀರ್ ಅಹ್ಮದ್, ರಾಜು ಪೂಜಾರಿ, ಡಾ. ಪ್ರೇಮದಾಸ್, ಜ್ಯೋತಿ ಹೆಬ್ಬಾರ್, ದೇವಿ ಪ್ರಸಾದ್ ಶೆಟ್ಟಿ, ವಿನಯ ಬಲ್ಲಾಳ್, ಕೆ. ಅಣ್ಣಯ್ಯ ಶೇರಿಗಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದೇವಕಿ ಸಣ್ಣಯ್ಯ, ಪಿ. ಬಾಲಕೃಷ್ಣ ಪೂಜಾರಿ, ಮುಷ್ತಾಕ್ ಅಹ್ಮದ್, ಹಬೀಬ್ ಅಲಿ, ಕೀರ್ತಿ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ರೋಶನಿ ಒಲಿವರ್, ಡಾ. ಸುನೀತಾ ಶೆಟ್ಟಿ, ಸುರೇಶ್ ನಾಯ್ಕ್, ಶಶಿಧರ ಶೆಟ್ಟಿ ಎಲ್ಲೂರು, ರಾಘವ ದೇವಾಡಿಗ, ಉದ್ಯಾವರ ನಾಗೇಶ್ ಕುಮಾರ್, ಹರಿಶ್ಚಂದ್ರ ಕೊಡವೂರು, ವಿನೋದ್ ಕುಮಾರ್, ಉಪೇಂದ್ರ ಮೆಂಡನ್, ಎಂ.ಪಿ. ಮೊಯಿದಿನಬ್ಬ, ತೇಜಪಾಲ ಸುವರ್ಣ, ಕಿಶೋರ್ ಕುಮಾರ್ ಎರ್ಮಾಳ್, ರಾಜೇಶ್ ಶೆಟ್ಟಿ ಬ್ರಹ್ಮಾವರ, ಅಬ್ದುಲ್ ಅಜೀಜ್ ಹೆಜಮಾಡಿ, ಜನಾರ್ದನ ಭಂಡಾರ್ಕಾರ್, ಕೃಷ್ಣಮೂರ್ತಿ ಆಚಾರ್ಯ, ಪೀರು ಸಾಹೇಬ್, ಉಪೇಂದ್ರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿಯವರು ವಂದಿಸಿದರು


Spread the love