ಕಾಪು: ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ

Spread the love

ಕಾಪು: ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ

ಉಡುಪಿ: ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟಕ್ಕೆ ಯತ್ನಿಸಿದ ಒರ್ವನನ್ನು ಕಾಪು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತನನ್ನು ಏಣಗುಡ್ಡೆ ನಿವಾಸಿ ಮಹಮ್ಮದ್ ಖಮರುದ್ದೀನ್ (34) ಎಂದು ಗುರುತಿಸಲಾಗಿದೆ.

ಶನಿವಾರ ಬೆಳಿಗ್ಗೆ ಕಾಪು ಪಿ ಎಸ್ ಐ ರಾಜ್ ಶೇಖರ್ ಬಿ ಸಾಗನೂರು ಅವರಿಗೆ ಮಲ್ಲಾರು ಗ್ರಾಮದ ಪಕೀರಣಕಟ್ಟೆ ಮಹಮ್ಮದ್ ಶಾಕೀರ್ ರವರ ಮನೆಯ ಪೂರ್ವ ಬದಿಯಲ್ಲಿ ದನಗಳನ್ನು ಮಾಂಸ ಮಾಡಿ ಮಾರಾಟ ಮಾಡಲು ತಯಾರಿ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಓಡಿ ಹೋದವರ ಮಾಹಿತ ಪಡೆದಿದ್ದು ಶಿಫಾನ್ ಪಕೀರಣಕಟ್ಟೆ ಮತ್ತು ದಿಶಾನ್ ಪಕೀರಣಕಟ್ಟೆ ಎಂದು ತಿಳಿಸಿದ್ದು ಅವರಿಗೆ ದನದ ಮಾಂಸ ಮಾಡಲು ಯಾವುದೇ ಪರವಾನಿಗೆ ಇಲ್ಲದಿರುವುದು ಪತ್ತೆಯಾಗಿದೆ.

ಬಂಧಿತ ಸ್ಥಳದಿಂದ ಸುಮಾರು 15 ಕೆ.ಜಿ ದನದ ಮಾಂಸ, ನೀಲಿ ಬಣ್ಣದ ಟರ್ಪಲ್ -1, ಒಂದು ಅಡಿ ಸುತ್ತಳತೆಯ ಒಂದು ಅಡಿ ಉದ್ದದ ಮರದ ತುಂಡು -1, ಕಬ್ಬಿಣದ ಹಿಡಿ ಇರುವ ಚೂರಿ -5, ದನದ ಮಾಂಸ ಸಾಗಾಟಕ್ಕೆ ತಂದಿದ್ದ 2ಮೋಟಾರು ಸೈಕಲ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಸುಮಾರು 53,300/- ರೂಪಾಯಿ ಆಗಬಹುದು.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love