ಕಾಪು ಚುನಾಯಿತ ಜನಪ್ರತಿನಿಧಿಗಳಿಗೆ ಚಿಂತನಾ-ಮಂಥನಾ ತರಬೇತಿ ಕಾರ್ಯಾಗಾರ

Spread the love

ಕಾಪು ಚುನಾಯಿತ ಜನಪ್ರತಿನಿಧಿಗಳಿಗೆ ಚಿಂತನಾ-ಮಂಥನಾ ತರಬೇತಿ ಕಾರ್ಯಾಗಾರ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ  ಕಾಂಗ್ರೆಸ್  ಪಕ್ಷದ  ಸ್ಥಳೀಯಾಡಳಿತದ ಚುನಾಯಿತ ಜನಪ್ರತಿನಿಧಿಗಳ  ಒಂದು  ದಿನದ “ಚಿಂತನಾ -ಮಂಥನಾ” ಎಂಬ  ತರಬೇತಿ  ಕಾರ್ಯಾಗಾರವು ವಿನಯ್ ಕುಮಾರ್ ಸೊರಕೆ ಮಾಜಿ ನಗರಾಭಿವೃದ್ದಿ ಸಚಿವರು ಮತ್ತು ಶಾಸಕರು ಕಾಪು ವಿಧಾನಸಭಾ ಕ್ಷೇತ್ರ  ಇವರ ಘನ ಉಪಸ್ಥಿತಿಯಲ್ಲಿ   ರಾಜೀವ್  ಗಾಂಧಿ ನ್ಯಾಶನಲ್ ಅಕಾಡಮಿ ಆಫ್  ಪೊಲಿಟಿಕಲ್ ಏಜುಕೇಶನ್ ಎರ್ಮಾಲ್ ಇಲ್ಲಿ  ನಡೆಯಿತು.

 ತರಬೇತಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಚುನಾಯಿತ  ಜನಪ್ರತಿನಿಧಿಗಳು  ತಮ್ಮನ್ನು  ಆರಿಸಿದ  ಎಲ್ಲಾ  ಸಮಾಜದ  ಜನಸಾಮಾನ್ಯರೊಂದಿಗೆ  ಅವರ ಎಲ್ಲ  ಒಳಿತು ಕೆಡುಕಿನೊಂದಿಗೆ ಸಹಭಾಗಿತ್ವದೊಂದಿಗೆ ಬೆರೆತು ಜನಮನದಲ್ಲಿ ಉಳಿಯುವ  ಮನಮುಟ್ಟುವಂತಹ  ಕೆಲಸವನ್ನು ಮಾಡಬೇಕು   ಅವರ ಒಲವನ್ನು  ನಾವು  ಪಡೆಯಬೇಕು ಚುನಾಯಿತ ಜನಪ್ರತಿನಿಧಿಗಳು ಮುಖ್ಯವಾಗಿ  ಅವರಿಗೆ  ಇರುವಂತಹ  ಜವಾಬ್ದಾರಿಯನ್ನು   ಪ್ರಾಮಾಣಿಕವಾಗಿ ಮಾಡಬೇಕು ಅಂತೆಯೇ  ಅವರಿಗೇ ಇರುವಂತಹ ಜವಾಬ್ದಾರಿಯನ್ನು ಯಾವತ್ತೂ ಮರೆಯಬಾರದು  . ಹಾಗೆಯೇ ಈ ತರಬೇತಿಯ ಮುಖ್ಯ  ಉದ್ದೇಶ  ಒಬ್ಬ  ಚುನಾಯಿತ  ಜನಪ್ರತಿನಿಧಿಯ ಮುಖ್ಯ  ಕರ್ತವ್ಯ ಏನು ಅವನ ಕರ್ತವ್ಯಗಳನ್ನು ಹೇಗೆ ನಿಭಾಯಿಸುವುದು , ಜನ ಸಾಮಾನ್ಯರ  ಕೆಲಸ ಕಾರ್ಯಗಳಿಗೆ ಯಾವ ರೀತಿ ಮಾಡಬೇಕು ಮತ್ತು  ಅವರ  ಸಮಸ್ಯೆಗಳನ್ನು ಹೇಗೆ ಸಾಮರಸ್ಯದಿಂದ ಬಗೆಹರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ತರಬೇತಿ ಕಾರ್ಯಾಗಾರ ಕಾರ್ಯಕ್ರಮದ ತರಬೇತುದಾರರಾಗಿ ಅಜ್ಸೀಮ್ ಪ್ರೇಮ್ ಜೀ ಫೌಂಡೇಶನ್ ನ ಡಾ! ಕೃಷ್ಣ ಕೋತಾಯ್ಯ , ನಮ್ಮ ಭೂಮಿಯ  ಡಾ! ದಾಮೋದರ್ ಆಚಾರ್ಯ ಮತ್ತು  ಕಾರ್ಕಳದ  ಹೆಸರಾಂತ  ತರಬೇತುದಾರ  ಸುಧಾಕರ್  ಕಾರ್ಕಳ, ಉತ್ತರ ವಲಯ – ದಕ್ಷಿಣ ವಲಯದ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷರು , ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ,   ಕಾಂಗ್ರೆಸ್  ಪಕ್ಷದ  ಚುನಾಯಿತ  ; APMC ಸದಸ್ಯರು;  ಪುರಸಭೆ ಅಧ್ಯಕ್ಷರು ಉಪಾಧ್ಯಕ್ಷರು  ಮತ್ತು  ಸರ್ವ ಸದಸ್ಯರು ; ಜಿಲ್ಲಾ ಪಂಚಾಯತ್ ಸದಸ್ಯರು; ತಾಲೂಕು ಪಂಚಾಯತ್ ಸದಸ್ಯರು; ವಿವಿದ ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷರು  ಉಪಾಧ್ಯಕ್ಷರು ಹಾಗೆಯೇ  ಕಾಂಗ್ರೆಸ್  ಪಕ್ಷದ   ಮುಂಚೂಣಿ  ಘಟಕ  ನಾಯಕರು ಮುಖಂಡರುಗಳು ಉಪಸ್ಥಿತರಿದ್ದರು  ಅಶೋಕ್ ಕುಮಾರ್ ಕೊಡವೂರು ಕಾರ್ಯಕ್ರಮ  ನಿರೂಪಿಸಿದರು.

 


Spread the love