ಕಾಪು ತಾಲೂಕು ಭೂನ್ಯಾಯ ಮಂಡಳಿಗೆ ಸದಸ್ಯರ ನೇಮಕ

Spread the love

ಕಾಪು ತಾಲೂಕು ಭೂನ್ಯಾಯ ಮಂಡಳಿಗೆ ಸದಸ್ಯರ ನೇಮಕ

ಉಡುಪಿ: ಕಾಪು ತಾಲೂಕು ಭೂನ್ಯಾಯ ಮಂಡಳಿಗೆ ರಾಜ್ಯ ಸರಕಾರ ನಾಲ್ವರನ್ನು ಸದಸ್ಯರನ್ನಾಗಿ ನೇಮಿಸಿ ನಾಮ ನಿರ್ದೇಶನ ಮಾಡಿದೆ

ರೋಹನ್ ಕುಮಾರ್ ಕುತ್ಯಾರು, ಮೆಲ್ವಿನ್ ಡಿಸೋಜಾ ಶಿರ್ವ, ರಮೀಜ್ ಹುಸೈನ್ ಪಡುಬಿದ್ರಿ ಮತ್ತು ರಾಘವ ಕೋಟ್ಯಾನ್ ಬೆಳ್ಳೆ ಇವರುಗಳನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರನ್ನು ಮಂಡಳಿಯ ಅಧ್ಯಕ್ಷರಾನ್ನಾಗಿ, ಕಾಪು ತಾಲೂಕ ತಹಶೀಲ್ದಾರರವರನ್ನು ಸದಸ್ಯ ಕಾರ್ಯದರ್ಶಿಯಾಗಿ, ರಾಜ್ಯಪಾಲರ ಆಜ್ಞಾನುಸಾರ ಮುಂದಿನ ಆದೇಶದ ವರೆಗೆ ನೇಮಿಸಿ ನಾಮನಿರ್ದೇಶನಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಗೌರಮ್ಮ ಆರ್ ಆದೇಶದಲ್ಲಿ ತಿಳಿಸಿದ್ದಾರೆ.


Spread the love