ಕಾಪು: ಪಾದೂರು-ನಂದಿಕೂರು ನಡುವಿನ ಹೈಟೆನ್ಶನ್ ಲೈನ್ ಸರ್ವೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರ ತಡೆ

m
Spread the love

ಕಾಪು: ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕಕ್ಕೆ ನಂದಿಕೂರು-ಪಾದೂರುವರೆಗೆ ವಿದ್ಯುತ್ ಲೈನ್ ಮತ್ತು ಟವರ್ ನಿರ್ಮಾಣಕ್ಕಾಗಿ ಶುಕ್ರವಾರ ಕಳತ್ತೂರು-ಚಂದ್ರನಗರ ಪರಿಸರದಲ್ಲಿ ಪೆÇಲೀಸ್ ಬಲದೊಂದಿಗೆ ಸರ್ವೆಗೆ ಆಗಮಿಸಿದ ಸರ್ವೆ ತಂಡವನ್ನು ಕಳತ್ತೂರು ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಹಿಮ್ಮೆಟ್ಟಿಸಲಾಯಿತು.

ಜಿಲ್ಲಾ„ಕಾರಿಗಳ ನಿರ್ದೇಶನದಂತೆ ತೀವ್ರ ಜನವಿರೋಧದ ನಡುವೆಯೂ ಉಡುಪಿ ತಹಶೀಲ್ದಾರ್ ಗುರುಪ್ರಸಾದ್, ಡಿ.ವೈ.ಎಸ್ಪಿ ವಿನಯ್ ನಾಯಕ್, ಕಾಪು ಸಿಐ ಸುನೀಲ್ ನಾಯಕ್, ಶಿರ್ವ ಎಸ್ಸೈಪಡುಬಿದ್ರಿ ಎಸ್ಸೈ ಅಜ್ಮತ್ ಆಲಿ ಹಾಗೂ ನಲ್ವತ್ತಕ್ಕೂ ಅಧಿಕ ಪೋಲೀಸ್ ಸಿಬ್ಬಂದಿಗಳ ಭದ್ರತೆಯೊಂದಿಗೆ ಐ.ಎಸ್.ಪಿ.ಆರ್.ಎಲ್‍ನ ಮುಖ್ಯಸ್ಥ ವಿಜಯಾನಂದ್ ಮತ್ತು ಲಿಂಡೇ ಕಂಪೆನಿಯ ಅದಿಕಾರಿಗಳು 15ಕ್ಕೂ ಅ„ಕ ಮಂದಿಯ ತಂಡ ಐದು ಪ್ರದೇಶಗಳಲ್ಲಿ ಸರ್ವೆಗೆ ಆಗಮಿಸಿತ್ತು.

m
m

20150515_155655

ಸರ್ವೆಗೆ ಆಗಮಿಸಿರುವ ಸುದ್ಧಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಗ್ರಾ. ಪಂ. ಒಕ್ಕೂಟದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ, ಜಿ. ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು, ಕಳತ್ತೂರು ಜನಜಾಗೃತಿ ಸಮಿತಿಯ ಸಂಚಾಲಕರಾದ ಲಾರೆನ್ಸ್ ಫೆರ್ನಾಂಡಿಸ್, ಪೈಯ್ಯಾರು ಶಿವರಾಮ ಶೆಟ್ಟಿ, ನಿತ್ಯಾನಂದ ಆರ್. ಶೆಟ್ಟಿ, ಪ್ರವೀಣ್ ಕುಮಾರ್ ಮತ್ತು ದಿವಾಕರ ಡಿ. ಶೆಟ್ಟಿ ನೇತೃತ್ವದ ತಂಡವು ಯಾವುದೇ ಕಾರಣಕ್ಕೂ ಸರ್ವೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸರ್ವೆ ಕಾರ್ಯಕ್ಕೆ ಅಡ್ಡಿ ಪಡಿಸಿತು.

ಈ ಸಂದರ್ಭ ಸರ್ವೆ ಅಧಿಕಾರಿಗಳು, ಪೋಲೀಸ್ ಇಲಾಖೆ, ಹೋರಾಟಗಾರರು, ಸಂತ್ರಸ್ತರು ಮತ್ತು ಸ್ಥಳೀಯರ ನಡುವೆ ಭಾರೀ ಮಾತಿನ ಚಕಮಕಿ ಏರ್ಪಟ್ಟು ಪರಿಸ್ಥಿತಿ ಉದ್ವಿಗ್ನಗೊಂಡಿತು. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಇಲ್ಲಿ ಸರ್ವೆಗೆ ಅವಕಾಶ ಮಾಡಿಕೊಡುವುದೇ ಇಲ್ಲ ಎಂದು ಬಿಗಿಪಟ್ಟು ಹಿಡಿದರು.

ಕಾಂಗ್ರೆಸ್ ಮುಖಂಡ ಡಾ| ದೇವಿಪ್ರಸಾದ್ ಶೆಟ್ಟಿ ಈ ಸಂದರ್ಭ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರಿಗೆ ವಿಷಯ ತಿಳಿಸಿದ್ದು, ಅವರು ತಹಶೀಲ್ದಾರ್ ಜೊತೆಗೆ ಮಾತನಾಡಿ ಚುನಾವಣಾ ಸಂದರ್ಭದಲ್ಲೇ ಈ ರೀತಿಯಾಗಿ ವರ್ತಿಸಲು ನಿಮಗೆ ಯಾರು ಹೇಳಿದ್ದು, ಜನರ ಬೇಡಿಕೆ ಈಡೇರಿಸಿ, ನಂತರ ಸರ್ವೆಗೆ ಹೋಗಿ ಎಂದು ಎಂದು ಗದರಿಸಿದ ಹಿನ್ನೆಲೆಯಲ್ಲಿ ಇಡೀ ತಂಡ ಸ್ಥಳದಿಂದ ನಿರ್ಗಮಿಸಲು ಮುಂದಾಯಿತು.

ಈ ವೇಳೆ ಜಿಲ್ಲಾಧಿಕಾರಿ ದೂರವಾಣಿ ಕರೆಯ ಮೂಲಕ ತಹಶೀಲ್ದಾರ್ ಮತ್ತು ಪೋಲೀಸ್ ಇಲಾಖೆಗೆ ದೂರವಾಣಿ ಕರೆ ಮಾಡಿ ಹೇಗಾದರೂ ಮಾಡಿ ಇಂದೇ ಸರ್ವೆ ಮುಗಿಸಿ ಬನ್ನಿ ಎಂದು ಮತ್ತೆ ಸೂಚನೆ ನೀಡಿದ್ದು, ಜಿಲ್ಲಾಧಿಕಾರಿಗಳ ಸೂಚನೆಯನ್ನು ಪಾಲಿಸಲು ಮುಂದಾದ ಸರ್ವೆ ತಂಡಕ್ಕೆ ಸ್ಥಳೀಯರು ಮತ್ತೆ ತಡೆಯೊಡ್ಡಿದ್ದು, ಆಗ ಮತ್ತೆ ಸಂಘರ್ಷದ ವಾತಾವರಣ ನಿರ್ಮಾಣವಾಯಿತು.

ಸರ್ವೆಗೆ ಜನರು ಅಡ್ಡಿ ಪಡಿಸುತ್ತಿರುವ ವಿಚಾರವನ್ನು ತಿಳಿದ ಪೆÇಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಸ್ಥಳಕ್ಕೆ ಧಾವಿಸಿ ಬಂದು ಪ್ರತಿಭಟನಾ ನಿರತರನ್ನು ಸಮಾಧಾನಗೊಳಿಸುವ ಪ್ರಯತ್ನ ನಡೆಸಿದರು. ಆದರೆ ಪ್ರತಿಭಟನಾ ನಿರತರು ಮಾತ್ರ ನಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ನಾವು ಸರ್ವೆಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಬಿಗಿಪಟ್ಟು ಹಿಡಿದರು.

ಈ ವೇಳೆ ಎಸ್ಪಿ ಅಣ್ಣಾಮಲೈ ಅವರು ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಮತ್ತು ಐಎಸ್‍ಪಿಆರ್‍ಎಲ್ ಅದಿಕಾರಿ ವಿಜಯಾನಂದ್, ಹೈಟೆನ್ಶನ್ ಲೈನ್‍ನ ಸರ್ವೆ ತಂಡವಾದ ಲಿಂಡೇ ಗ್ರೂಫ್ ಮತ್ತು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ಭರವಸೆ ನೀಡಿದ ಮೇರೆಗೆ ಜನರು ಸ್ಥಳದಿಂದ ನಿರ್ಗಮಿಸಲು ಒಪ್ಪಿದರು.

ಪಾದೂರು ಯೋಜನೆಯ ಹೈಟೆನ್ಶನ್ ಲೈನ್ ಹಾದು ಹೋಗುವ ಜಾಗದಲ್ಲಿ ಪಟ್ಟಾದಾರರಿಗೆ ಮಾರುಕಟ್ಟೆ ಧಾರಣೆಗಿಂತ ನಾಲ್ಕು ಪಟ್ಟು ಹೆಚ್ಚಿನ ಭೂ ಮೌಲ್ಯವನ್ನು ನೀಡಬೇಕು. ಕನ್ವರ್ಶನ್ ಸಂಬಂ„ಯಾಗಿ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳಬೇಕು. ಮತ್ತು ಸಂಪೂರ್ಣವಾಗಿ ಜನರಿಗೆ ಮಾಹಿತಿ ನೀಡಿಯೇ ಸರ್ವೆ ನಡೆಸಬೇಕು ಎನ್ನುವುದು ಹೋರಾಟಗಾರರ ಬೇಡಿಕೆ.

ಲೈನ್ ಹಾದು ಹೋಗುವ 9 ಮೀಟರ್ ಅಗಲದ ಜಾಗಕ್ಕೆ ಮಾರುಕಟ್ಟೆ ಧಾರಣೆಯ ಶೇ. 20ರಷ್ಟು ಪರಿಹಾರ ನೀಡುವುದು. ಲೈನ್ ಹಾದು ಹೋಗುವ 29 ಮೀಟರ್ ಪ್ರದೇಶಕ್ಕೆ ಮಾರುಕಟ್ಟೆ ಧಾರಣೆಗಿಂತ ಒಂದೂವರೆ ಪಟ್ಟು ಹೆಚ್ಚಿನ ಭೂ ಮೌಲ್ಯ ನೀಡುವುದು. ಮುಂದೆ ನಾಲ್ಕು ಪಟ್ಟು ಹೆಚ್ಚಿನ ಪರಿಹಾರ ಧನವನ್ನು ನೀಡುವ ಬಗ್ಗೆ ಚಿಂತಿಸುವುದು. ಹೈಟೆನ್ಶನ್ ಲೈನ್ ಹಾದು ಪ್ರದೇಶದ ಭೂ ಕನ್ವರ್ಶನ್ ಕುರಿತಾದ ಗೊಂದಲವನ್ನು ನಿವಾರಿಸುವುದೂ ಸೇರಿದಂತೆ ಮೇ 16ರಂದು ಜಿಲ್ಲಾ„ಕಾರಿಗಳ ಸಮ್ಮುಖದಲ್ಲಿ ಲಿಖಿತ ಪತ್ರ ನೀಡುವ ಭರವಸೆ ನೀಡಿದರು.

ಈ ಕುರಿತಾಗಿ ಮೇ 16ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಯುವ ಸಭೆಯಲ್ಲಿ ವಿಸ್ತ್ರತವಾದ ಚರ್ಚೆ ನಡೆಯಲಿದ್ದು, ಜಿಲ್ಲಾಡಳಿತ, ಕಂಪೆನಿ, ಸಂತ್ರಸ್ಥರು ಮತ್ತು ಹೋರಾಟಗಾರರ ನಡುವಿನ ಗೊಂದಲವನ್ನು ಪರಿಹರಿಸುವ ಕುರಿತು ಕಾದು ನೋಡಬೇಕಾಗಿದೆ.

ಗ್ರಾ. ಪಂ. ಒಕ್ಕೂಟದ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ, ಜಿ. ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು, ಕಳತ್ತೂರು ಜನಜಾಗೃತಿ ಸಮಿತಿಯ ಸಂಚಾಲಕರುಗಳಾದ ಪೈಯ್ಯಾರು ಶಿವರಾಮ ಶೆಟ್ಟಿ, ಲಾರೆನ್ಸ್ ಫೆರ್ನಾಂಡಿಸ್, ದಿವಾಕರ ಡಿ. ಶೆಟ್ಟಿ, ಕುತ್ಯಾರು ಗ್ರಾ. ಪಂ. ಮಾಜಿ ಅಧ್ಯಕ್ಷರುಗಳಾದ ಕುತ್ಯಾರು ನವೀನ್ ಶೆಟ್ಟಿ, ನಿತ್ಯಾನಂದ ಆರ್. ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಮುಖರಾದ ರಂಗನಾಥ್ ಶೆಟ್ಟಿ, ಸುಧಾಕರ ಶೆಟ್ಟಿ, ದಿವಾಕರ ಬಿ. ಶೆಟ್ಟಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.


Spread the love