ಕಾಪು ಪುರಸಭಾ ಒಳಚರಂಡಿ ಕಾಮಗಾರಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ದಾರುಣ ಸಾವು

ಕಾಪು ಪುರಸಭಾ ಒಳಚರಂಡಿ ಕಾಮಗಾರಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ದಾರುಣ ಸಾವು

ಉಡುಪಿ: ಕಾಪು ಪುರಸಭಾ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಸಂದರ್ಭ ಮಣ್ಣು ಕುಸಿದು ಇಬ್ಬರು ಕೂಲಿ ಕಾರ್ಮಿಕರು ಧಾರುಣವಾಗಿ ಮೃತ ಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.

ಮೃತ ಕೂಲಿ ಕಾರ್ಮಿಕರನ್ನು ಚಿತ್ರದುರ್ಗ ಮೂಲಕ ದಾಸಪ್ಪ ಹಾಗೂ ಉಮೇಶ್ ಎಂದು ಗುರುತಿಸಲಾಗಿದೆ.

ಕಳೆದ ಒಂದು ತಿಂಗಳಿಂದ ಕಾಪು ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಭೂಮಿಯಡಿಯಲ್ಲಿ ಕಾಮಗಾರಿ ನಡೆಯುತ್ತಿತ್ತು.

ಮಂಗಳವಾರ ಮಧ್ಯಾಹ್ನ ಚೇಂಬರ್ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಅದಕ್ಕಾಗಿ ಸುಮಾರು 10 ಅಡಿ ಅಳ ಆಗೆಯಲಗಿತ್ತು. ದಾಸಪ್ಪ ಹಾಗೂ ಉಮೆಶ್ ಕೆಳ ಹಂತದಲ್ಲಿ ಕಾಮಗಾರಿ ಮಾಡುತ್ತಿದ್ದಾಗ, ಏಕಾಏಕಿ ಮೇಲಿನ ಮಣ್ಣು ಕುಸಿದು ಇಬ್ಬರು ಮಣ್ಣಿನ ಅಡಿಯಲ್ಲಿ ಸಿಲುಕಿ ಹಾಕಿ ಕೊಂಡಿದ್ದಾರೆ. ಪಕ್ಕನೇ ಸ್ಥಳದಲ್ಲಿದ್ದ ಜೆಸಿಪಿಯಿಂದ ಮಣ್ಣನ್ನು ಹೊರತೆಗೆಯಲು ಪ್ರಯತ್ನಿಸಲಾಯಿತದರೂ ಇನ್ನಷ್ಟು ಸಮಯ ವ್ಯರ್ಥ ಆಗಿದೆ.

ಈ ಸಂದರ್ಭ ರಂಗತರಂಗದ ಕಲಾವಿದ ರಾಜೇಶ್ ಅಳಪೆ ಹಾಗೂ ಸಮಾಜ ಸೇವಕ ಸೂರಿ ಶೆಟ್ಟಿಯವರು ಕೆಳಕ್ಕೆ ಹಾರಿ ಮಣ್ಣು ತೆಗೆದು ಇಬ್ಬರನ್ನು ಮೇಲಕ್ಕೆ ಎತ್ತಿದ ರಾದರೂ, ಸುಮಾರು ಅರ್ಥ ತಾಸಿಗಿಂತಲೂ ಹೆಚ್ಚು ಸಮಯ ಮಣ್ಣಿನ ಅಡಿ ಇದ್ದುದರಿಂದ ಅವರು ತೀವ್ರ ಅಸ್ವಸ್ಥರಾಗಿದ್ದಾರೆ. ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಆಗಲೇ ಮೃತಪಟ್ಟಿದ್ದರು.

ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.