ಕಾಪು: ಮದುವೆ ಹಾಲ್ ಎದುರು ಇರಿಸಿದ ಕಾರಿನಿಂದ ಚಿನ್ನಾಭರಣ ಕಳವು

Spread the love

ಕಾಪುಮದುವೆ ಹಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್‌ ಮುರಿದು ಒಳ‌ಗಿನಿಂದ ಭಾರೀ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್‌ನ್ನು ಕದ್ದೊಯ್ದ ಘಟನೆ ರವಿವಾರ ಮೇ 10ರಂದು ಉದ್ಯಾವರದಲ್ಲಿ ನಡೆದಿದೆ.

wedding_gold_stoln 11-05-2015 07-19-43

ಉದ್ಯಾವರ ಹಲೀಮಾ ಸಾಬ್ಜು ಸಭಾಭವನದಲ್ಲಿ ರವಿವಾರ ನಡೆಯುತ್ತಲಿದ್ದ ವಿವಾಹ ಸಮಾರಂಭಕ್ಕೆ ಬಂದಿದ್ದ ವಧುವಿನ ಕಡೆಯವರು ಇರಿಸಿದ್ದ ಮಾರುತಿ ರಿಟ್ಜ್ ಕಾರಿನೊಳಗಿನಿಂದ ಸೊತ್ತುಗಳು ಕಳವಾಗಿದ್ದು, ಘಟನೆಯಿಂದಾಗಿ ವಧುವಿನ ಕಡೆಯವರು ಕಂಗಾಲಾಗಿ ಬಿಟ್ಟಿದ್ದಾರೆ.

ಕಾರಿನೊಳಗಿನಿಂದ ಚಿನ್ನದ ಕಿವಿಯೋಲೆ ಸೆಟ್‌, ಉಂಗುರ, ಮೊಬೈಲ್‌ ಹ್ಯಾಂಡ್‌ಸೆಟ್‌ ಮತ್ತು 5 ಸಾವಿರ ರೂಪಾಯಿ ನಗದು ಕಾಣೆಯಾಗಿದ್ದು, ಅದರ ಜೊತೆಗೆ ಎ.ಟಿ.ಎಂ ಕಾರ್ಡ್‌, ಪಾನ್‌ ಕಾರ್ಡ್‌ ಸಹಿತ ವಿವಿಧ ದಾಖಲೆ ಪತ್ರಗಳನ್ನು ಕದ್ದೊಯ್ಯಲಾಗಿದೆ.

ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love