ಕಾಪು ಶಾಸಕರು ಅಸಾಹಯಕತೆಯನ್ನು ತೋರಿಸುವ ಬದಲು ಬದ್ಧತೆಯನ್ನು ಪ್ರದರ್ಶಿಸಲಿ- ಸೊರಕೆ

Spread the love

ಕಾಪು ಶಾಸಕರು ಅಸಾಹಯಕತೆಯನ್ನು ತೋರಿಸುವ ಬದಲು ಬದ್ಧತೆಯನ್ನು ಪ್ರದರ್ಶಿಸಲಿ- ಸೊರಕೆ

ಉಡುಪಿ: ತಾನು ಶಾಸಕರಾಗಿ ಏಳು ತಿಂಗಳು ಕಳೆದರೂ ಕ್ಷೇತ್ರದ ಅಭಿವೃದ್ಧಿಗಾಗಿ ನಯಾಪೈಸೆ ಅನುದಾನ ತರಲಾಗದಿದ್ದುದಕ್ಕೆ ಸರ್ಕಾರದ ಮೇಲೆ ಗೂಬೆ ಕೂರಿಸಿ ಅಸಹಾಯಕತೆ ವ್ಯಕ್ತಪಡಿಸುವುದು ಶಾಸಕರು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮತ್ತು ಈ ರೀತಿಯ ಬೇಜವಾಬ್ದಾರಿ ಹೇಳಿಕೆಯನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿಯವರು ನೀಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಚಿವ ವಿನಯ್ ಕುಮಾರ್ ತಿಳಿಸಿದ್ದಾರೆ.

ಶಾಸಕರಾಗಿ ಆಯ್ಕೆಯಾದ ಮೇಲೆ ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕ್ರೋಢಿಕರಿಸಲು ವಿವಿಧ ಇಲಾಖೆಗಳಿಗೆ ಸ್ವತಃ ಭೇಟಿಯಿತ್ತು ಮಂಜೂರಾತಿಗೆ ಪ್ರಯತ್ನ ಪಡುವುದು ಒಬ್ಬ ಶಾಸಕನ ಬದ್ಧತೆಯನ್ನು ತೋರಿಸುತ್ತದೆ ಅದಕ್ಕೆ ಪ್ರಯತ್ನವನ್ನು ಮಾಡದಿದ್ದರೆ ಅನುದಾನ ಹೇಗೆ ಬರುತ್ತದೆ?

ಸರಕಾರದಲ್ಲಿ ಅನುದಾನದ ಕೊರೆತೆಯಿದ್ದರೆ ಇತ್ತೀಚೆಗೆ ಶಾಸಕರ ಸಂಬಂಧಿಕರು ಮತ್ತು ಅವರದೇ ಕೆಲವು ಆಪ್ತ ಗುತ್ತಿಗೆದಾರರಿಗೆ 4 ಕೋಟಿ ರೂ ಕಾಮಗಾರಿಯ ಹಣವನ್ನು ಮಂಜೂರು ಮಾಡಿಸಿಕೊಳ್ಳಲು ಹೇಗೆ ಸಾಧ್ಯವಾಯಿತು?

ಈ ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಮಯದಲ್ಲಿ ಚುನಾವಣೆ ಘೋಷಣೆಗೆ ಕೆಲವೇ ದಿನಗಳ ಮುಂಚೆಜನರನ್ನು ಮೂರ್ಖರನ್ನಾಗಿಸುವ ದುರುದ್ದೇಶದಿಂಧ 3 ಲಕ್ಷ ಕೋಟಿ ರೂಪಾಯಿಗಿಂತಲೂ ಜಾಸ್ತಿ ಕಾಮಗಾರಿಯ ಅನುದಾನವನ್ನು ಘೋಷಣೆ ಮಾಡಿದ ತಪ್ಪಿನಿಂದಾಗಿ ಇಂದು ಈ ಪರಿಸ್ಥೀತಿ ನಿರ್ಮಾಣವಾಗಿರುವುದು.

ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ಕರ್ನಾಟಕದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜನಪರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತಂದು ಜನರ ಒಲವು ಗಳಿಸಿರುವುದನ್ನು ಅರಗಿಸಿಕೊಳ್ಳಲಾಗದೆ ಗ್ಯಾರಂಟಿ ಕಾರ್ಯಕ್ರಮವನ್ನು ಚುನಾವಣಾ ಪೂರ್ವದಲ್ಲಿ ಕಸದ ಬುಟ್ಟಿಯಲ್ಲಿ ಹಾಕಿ ಎಂದು ಪ್ರಚಾರ ಮಾಡಿದ್ದು ಅಲ್ಲದೆ ಗ್ಯಾರಂಟಿ ಕಾರ್ಯಕ್ರಮ ಜಾರಿಯಾದರೆ ಅವರದೇ ಪಕ್ಷದ ಅಧ್ಯಕ್ಷ ತನ್ನ ತಲೆಯನ್ನು ಬೋಳಿಸುತ್ತೇನೆ ಎಂದು ಹೇಳಿದ್ದು ನೆನಪು ಮಾಡಿಕೊಳ್ಳುವುದು ಒಳ್ಳೆಯದು. ಗ್ಯಾರಂಟಿ ಸ್ಕೀಂ ಕ್ಷೇತ್ರದಲ್ಲಿ ಅನುಷ್ಠಾನವಾಗುವಾಗ ಎಲ್ಲೋ ಅಡಗಿ ಕೂತು ಜನರಿಗೆ ಸಿಗುವ ಸವಲತ್ತುಗಳ ಬಗ್ಗೆ ಟೀಕೆ ಮಾಡುವುದು ಎಷ್ಟು ಸೂಕ್ತ ಎಂದು ಸೊರಕೆ ಅಪಾದಿಸಿದ್ದಾರೆ. ಅಲ್ಲದೆ ಶಾಸಕರು ಕೆಲವೇ ಕೆಲವು ಗುತ್ತಿಗೆದಾರರಿಗೆ, ವ್ಯಾಪಾರಸ್ಥರಿಗೆ ಬೆಂಬಲಕೂಡುವುದು ಎದ್ದು ಕಾಣುತ್ತದೆ.

ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಮಂಜೂರುಗೊಂಡ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಹೊರೆ ಮಾತ್ರ ಈ ಸರ್ಕಾರದ್ದಾಗಿದೆ. ಶಾಸಕರಾಗಿದ್ದುಕೊಂಡು ಇವರ ಕೆಲವೊಂದು ಹೇಳಿಕೆಗಳು ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಸೊರಕೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love